Saturday, April 11, 2026
HomeEesanje Newsಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯಲು ಭಾರತ ಸಿದ್ಧತೆ..!

ಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯಲು ಭಾರತ ಸಿದ್ಧತೆ..!

ನವದೆಹಲಿ,ಏ.1- ಅಮೆರಿಕ – ಇರಾನ್‌ ಯುದ್ಧದ ನಡುವೆಯೇ ದಕ್ಷಿಣ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ ಎದುರಾಗಿದ್ದು, ಸದ್ಯದಲ್ಲೇ ಪಾಕ್‌ ಆಕ್ರಮಿತ ಕಾಶೀರವನ್ನು ತನ್ನ ವಶಕ್ಕೆ ಪಡೆಯಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2025ರ ಆಪರೇಷನ್‌ ಸಿಂಧೂರ್‌ ನಂತರ ತಣ್ಣಗಾಗಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ, 2026ರ ಆರಂಭದಲ್ಲಿ ಮತ್ತಷ್ಟು ಹದಗೆಟ್ಟಿದೆ. ಭಾರತದ ಸೇನಾ ಸನ್ನದ್ಧತೆ ಮತ್ತು ಪಾಕಿಸ್ತಾನದ ಆತಂಕದ ಹೇಳಿಕೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಅನಿಶ್ಚಿತತೆಯನ್ನು ಮೂಡಿಸಿವೆ.

ಮಾರ್ಚ್‌ 2026ರ ಆರಂಭದಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು, ಭಾರತವು ಮತ್ತೊಂದು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಜಾಗತಿಕ ವೇದಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಭಾರತವು ಇತ್ತೀಚೆಗೆ ಸುಧಾರಿತ ಪಿನಾಕಾ ಕ್ಷಿಪಣಿ ವ್ಯವಸ್ಥೆಗಳನ್ನು ಪರೀಕ್ಷಿಸಿದೆ ಮತ್ತು ಫ್ರಾನ್‌್ಸನಿಂದ ಹೆಚ್ಚಿನ ರಾಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ. ಭಾರತದ ಈ ನಡೆಯು ಕೇವಲ ರಕ್ಷಣಾತಕವೋ ಅಥವಾ ದೊಡ್ಡ ಮಟ್ಟದ ದಾಳಿಯ ಮುನ್ಸೂಚನೆಯೋ ಎಂಬ ಚರ್ಚೆ ಶುರುವಾಗಿದೆ.
ಮೇ 2025ರಲ್ಲಿ ಪಹಲ್ಗಾಮ್‌ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ನಂತರ ಉಭಯ ದೇಶಗಳ ನಡುವೆ ಶೀತಲ ಸಮರ ತಾರಕಕ್ಕೇರಿದೆ.

ಇತ್ತೀಚೆಗೆ ನಡೆದ ರೈಸಿನಾ ಡೈಲಾಗ್‌ನಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು, ಪಾಕಿಸ್ತಾನದ ವರ್ತನೆಯಲ್ಲಿ ಬದಲಾವಣೆಯಿಲ್ಲದ ಕಾರಣ ಭಾರತವು ಯಾವಾಗಲೂ ಸನ್ನದ್ಧವಾಗಿರಬೇಕು ಎಂದು ಎಚ್ಚರಿಸಿದ್ದಾರೆ. ಮಾ.28 ರಂದು ಸೇನಾ ಮುಖ್ಯಸ್ಥರ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ಮತ್ತು ಮಾ.24 ರಂದು ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಮುಖ್ಯಸ್ಥ ಅಮರಪ್ರೀತ್‌ ಸಿಂಗ್‌ ಭೇಟಿ ಮಾಡಿ ಅಲ್ಲಿನ ಸ್ಥಳೀಯ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದಾರೆ. ಇದೇ ಫೆಬ್ರವರಿಯಲ್ಲಿ ಭಾರತೀಯ ಸೇನೆಯು ನೀಡಿದ ಕೆಲವು ಸೂಚನೆಗಳು ಆಪರೇಷನ್‌ ಸಿಂಧೂರ್‌ 2.0 ಆರಂಭವಾಗುವ ಸಾಧ್ಯತೆಯನ್ನು ದಟ್ಟವಾಗಿಸಿವೆ.

ಗಡಿಯಲ್ಲಿ ಹೈ-ಅಲರ್ಟ್‌: ನುಸುಳುವಿಕೆಗೆ ಹೊಂಚುಗುಪ್ತಚರ ವರದಿಗಳ ಪ್ರಕಾರ, ಸುಮಾರು 1000 ರಿಂದ 1500 ಉಗ್ರರು ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತಕ್ಕೆ ನುಸುಳಲು ಹೊಂಚು ಹಾಕುತ್ತಿದ್ದಾರೆ. ಇದನ್ನು ತಡೆಯಲು ಭಾರತೀಯ ಸೇನೆಯು ಗಡಿಯಲ್ಲಿ ಹೈ-ಅಲರ್ಟ್‌ ಘೋಷಿಸಿದ್ದು, ಅತ್ಯಾಧುನಿಕ ಡ್ರೋನ್‌ ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದೆ. ಪ್ರಧಾನಿ ಮೋದಿ ಅವರು ಕೂಡ ಮುಂಬರುವ ಸವಾಲುಗಳನ್ನು ಎದುರಿಸಲು ದೇಶ ಸಿದ್ಧವಾಗಿರಬೇಕು ಎಂದು ಕರೆ ನೀಡಿರುವುದು ಗಂಭೀರತೆಯನ್ನು ಹೆಚ್ಚಿಸಿದೆ.

ಜಾಗತಿಕ ವರದಿಗಳ ಎಚ್ಚರಿಕೆ ಅಂತರಾಷ್ಟ್ರೀಯ ಚಿಂತಕರ ಚಾವಡಿಗಳು ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು 2026ರಲ್ಲಿ ಭಾರತ-ಪಾಕ್‌ ನಡುವೆ ಸಶಸ್ತ್ರ ಸಂಘರ್ಷ ಉಂಟಾಗುವ ಮಧ್ಯಮ ಮಟ್ಟದ ಸಾಧ್ಯತೆ ಇದೆ ಎಂದು ವರದಿ ಮಾಡಿವೆ. ವಿಶೇಷವಾಗಿ ಇರಾನ್‌-ಅಮೆರಿಕ ಸಂಘರ್ಷದ ಮೇಲೆ ಜಗತ್ತಿನ ಗಮನವಿರುವ ಈ ಸಮಯದಲ್ಲಿ, ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಲು ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರುತ್ತಿದೆ.

ಇದೇ ವೇಳೆ, ಪಾಕಿಸ್ತಾನಕ್ಕೆ ಭಾರತದ ಮೇಲೆ ದಾಳಿ ಮಾಡದಂತೆ ಚೀನಾ ಎಚ್ಚರಿಕೆ ನೀಡಿದೆ ಎಂಬ ಅಂಶವೂ ಚರ್ಚೆಯಾಗುತ್ತಿದೆ.ಭಾರತ ಸರ್ಕಾರವು ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿಲ್ಲ. ಸೇನಾ ಸನ್ನದ್ಧತೆಯು ರಕ್ಷಣಾತಕ ಕ್ರಮದ ಭಾಗವೂ ಆಗಿರಬಹುದು. ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಹಳೆಯ ವಿಡಿಯೋಗಳು ಅಥವಾ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ನಂಬಬೇಡಿ. ಅಧಿಕೃತ ಮಾಹಿತಿಗಾಗಿ ಭಾರತದ ರಕ್ಷಣಾ ಸಚಿವಾಲಯದ ಹೇಳಿಕೆಗಳನ್ನು ಗಮನಿಸುವುದು ಸೂಕ್ತ.

RELATED ARTICLES

Latest News