ಬೆಂಗಳೂರು,ಮಾ.31- ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ-2026ರ ದ್ವಿತೀಯ ಪಿಯುಸಿ ಪರೀಕ್ಷೆ -2 ರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏ.25 ರಿಂದ ಮೇ.8 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿದೆ. ಏ. 25 ರಂದು ಕನ್ನಡ, ಅರೇಬಿಕ್, ಏ.27 ರಂದು ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ, ಏ.28 ರಂದು ಇಂಗ್ಲಿಷ್, ಏ.29 ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಏ.30 ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಮೇ 2 ರಂದು ಇತಿಹಾಸ, ಗಣಿತ, ಗೃಹವಿಜ್ಞಾನ, ಮೇ 4 ರಂದು ರಾಜ್ಯಶಾಸ್ತ್ರ, ವಿದ್ಯುನಾನಶಾಸ್ತ್ರ, ಗಣಕವಿಜ್ಞಾನ, ಮೇ 5 ರಂದು ಹಿಂದಿ, ಮೇ 6 ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 7 ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲಗಣಿತ, ಮೇ 8 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.
ಮೇ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 :
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಪ್ರಕಟಿತ ವೇಳಾಪಟ್ಟಿ ಪ್ರಕಾರ, ಮೇ 18 ರಿಂದ ಮೇ 25 ರವರೆಗೆ ನಡೆಯಲಿದೆ. ಮೇ 18 ರಂದು ಪ್ರಥಮ ಭಾಷೆಯಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ.
ಮೇ 19 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಮೇ 20 ರಂದು ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ, ಮೇ 21 ರಂದು ಗಣಿತ, ಸಮಾಜಶಾಸ್ತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಮೇ 22 ರಂದು ತೃತೀಯ ಭಾಷೆಯ ವಿಷಯಗಳಾದ ಹಿಂದಿ(ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಜೊತೆಗೆ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಬೊಮೈಲ್, ಬ್ಯೂಟಿ ಅಂಡ್ ವೆಲ್‌ನೆಸ್, ಅಪರೆಲ್ ಮೇಡ್ ಅಪ್‌್ಸ ಮತ್ತು ಹೋಂ ಫರ್ನಿಷಿಂಗ್, ಎಲೆಕ್ಟ್ರಾನಿಕ್‌್ಸ ಮತ್ತು ಹಾರ್ಡ್‌ವೇರ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮೇ 23 ರಂದು ಸಮಾಜವಿಜ್ಞಾನ, ಮೇ 25 ರಂದು ಎಲಿಮೆಂಟ್‌್ಸ ಆಫ್ ಎಲೆಕ್ಟ್ರಾನಿಕ್‌್ಸ ಇಂಜಿನಿಯರಿಂಗ್, ಎಲಿಮೆಂಟ್‌್ಸ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್‌್ಸ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ಎಎನ್‌ಎಸ್‌ಐಸಿ, ಅರ್ಥಶಾಸ್ತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
