ಬೆಂಗಳೂರು,ಅ.11- ನೀವು ನೂರು ಕೋಟಿ ನಾವು ಬರೀ 25 ಕೋಟಿ ಯಾರಿಗೆ ತಾಕತ್ತಿದೆ ಬನ್ನಿ ನೋಡೋಣ ಎಂದು ಒಂದು ಸಮುದಾಯದ ಯುವಕರು ರಾಜಾರೋಷ ವಾಗಿ ರಸ್ತೆಯಲ್ಲಿ ಲಾಂಗ್, ಮಚ್ಚು ಝಳಪಿಸಿ ನೃತ್ಯ ಮಾಡಿದ್ದಾರೆ.
ಇಂತಹ ನೃತ್ಯ ನಡೆದಿರೋದು ಕೇರಳದಲ್ಲಿ ಅಂದುಕೊಂಡರೆ ಅದು ನಿಮ್ಮ ಭ್ರಮೆ. ನಂಬಿದರೆ ನಂಬಿ
ಬಿಟ್ಟರೆ ಬಿಡಿ ಇಂತಹ ಘಟನೆ ನಡೆದಿರುವುದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎನ್ನುವುದು ಮಾತ್ರ ಸತ್ಯ.
ಅದರಲ್ಲೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ಅಂದರೆ ನೀವು ನಂಬುತ್ತಿರಾ.
ಈದ್ ಮಿಲಾದ್ ಸಂದರ್ಭದಲ್ಲಿ ಕೆಲವು ಪುಂಡರು ಇಂತಹ ನೃತ್ಯ ಮಾಡಿರುವ ವಿಡಿಯೋ ತುಣುಕು ಈಗ ಎಲ್ಲೇಡೆ ವೈರಲ್‍ಆಗಿದೆ. ನಡು ರಸ್ತೆಯಲ್ಲೇ ರಾಜಾರೋಷವಾಗಿ ಕೆಲವು ಪುಂಡರು ದೇಶ ದ್ರೋಹಿ ಘೋಷಣೆಗಳನ್ನು ಕೂಗುತ್ತಿದ್ದರೂ ಸಿದ್ದಾಪುರ ಠಾಣೆ ಪೊಲೀಸರು ಏನು ಮಾಡುತ್ತಿದ್ದರೂ ಎಂಬುದು ಮಾತ್ರ ಯಾರಿಗೂ ಆರ್ಥವಾಗುತ್ತಿಲ್ಲ.
ಹೋಗಲಿ ಅವರು ತಮ್ಮ ನೃತ್ಯಕ್ಕೆ ಬಳಸಿಕೊಂಡ ಸಂಗೀತ ಯಾವುದು ಅಂತೀರಾ.. ಅದು ಅಸಾದುದ್ದೀನ್ ಓವೈಸಿ ಸಹೋದರ ಹಾಗೂ ತೆಲಂಗಾಣದ ಎಂಐಎಂ ಶಾಸಕ ಅಕ್ಬರುದ್ದಿನ್ ಓವೈಸಿ ಅವರು ಕೆಲ ವರ್ಷಗಳ ಹಿಂದೆ ಮಾಡಿದ್ದ ಹಿಂದೂಸ್ತಾನದ ಹಿಂದೂಗಳೇ ನೀವು ನೂರು ಕೋಟಿ ಇದ್ದೀರಲ್ಲ ಸರಿ ನಾವು ಇರೋದೋ ಕೇವಲ 25 ಕೋಟಿ ನೀವು ನಮಗಿಂತ ಹೆಚ್ಚಾಗಿದ್ದರೂ ಯಾರಿಗೆ ತಾಕತ್ತು ಇದೆ ನೋಡೋಣ ಎಂಬ ಭಾಷಣದ ತುಣುಕುಗಳನ್ನೇ ಪುಂಡರು ಡಿಜೆಯನ್ನಾಗಿ ಪರಿವರ್ತಿಸಿಕೊಂಡಿದ್ದರು.
ಇದೇ ಹಾಡಿಗೆ ನಡುರಸ್ತೆಯಲ್ಲೇ ಮಚ್ಚು, ಲಾಂಗು ಹಿಡಿದು ಕುಣಿದು ಕುಪ್ಪಳಿಸುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಯಾಕೆ ಎಂಬ ಯಕ್ಷ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡತೊಡಗಿದೆ.
19 ಮಂದಿ ವಶಕ್ಕೆ: ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ವೇಳೆ ಸೋಮೇಶ್ವರ ನಗರದಲ್ಲಿ ಡಿಜೆ ಹಾಕಿಕೊಂಡು ಲಾಂಗ್ ಹಿಡಿದು ಕುಣಿಯುತ್ತಿದ್ದ 19 ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಯುವಕರು ಅಂದು ಲಾಂಗ್ ಹಿಡಿದು ಕುಣಿದು ಕುಪ್ಪಳಿಸಿರುವ ದೃಶ್ಯದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 19 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈದ್ ಮಿಲಾದ್ ಸಂದರ್ಭದಲ್ಲಿ ಯಾರ ಭಾಷಣದ ತುಣುಕುಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.