ಟೆಹರಾನ್‍ನ ಜೈಲಿನಲ್ಲಿ ಕೈದಿಗಳ ಮಾರಾಮಾರಿ, ಜೈಲಿಗೆ ಬೆಂಕಿ, 8 ಜನ ಸಾವು

Social Share

ಇರಾನ್, ಅ.18- ಕೈದಿಗಳು ಕಿತ್ತಾಡಿ ಜೈಲಿಗೆ ಬೆಂಕಿ ಹಾಕಿದ ಪರಿಣಾಮ 8 ಮಂದಿ ಸಜೀವವಾಗಿ ದಹನಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಟೆಹರಾನ್‍ನ ಏವಿಯನ್ ಜೈಲಿನಲ್ಲಿ ನಡೆದಿದೆ.

ಘಟನೆಯಲ್ಲಿ ಇಡೀ ಜೈಲು ಬೆಂಕಿಗೆ ಆಹುತಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇರಾನ್‍ನಲ್ಲಿ ಹಿಜಾಬ್ ಸಂಘರ್ಷ ತಲೆದೋರಿರುವ ಬೆನ್ನಲ್ಲೇ ಜೈಲಿನಲ್ಲಿ ಕೈದಿಗಳ ಕಿತ್ತಾಟ ಘಟನೆ ನಡೆದಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ.

ದರೋಡೆ, ಹೀನ ಅಪರಾಧ ಪ್ರಕರಣಗಳಲ್ಲಿ ಬಂತರಾದ ಹಲವಾರು ಕೈದಿಗಳು ಈ ಜೈಲಿನಲ್ಲಿದ್ದು, ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಜೈಲಿಗೆ ಬೆಂಕಿ ಹಾಕಲಾಗಿದೆ. ಭಾರೀ ಪ್ರಮಾಣದ ಅಗ್ನಿ ಇಡೀ ಜೈಲನ್ನು ಆವರಿಸಿಕೊಂಡಿದ್ದಲ್ಲದೆ ದಟ್ಟ ಹೊಗೆ ಉಂಟಾಗಿ ಉಸಿರಾಡಲು ಅಪರಾಗಳು ಪರದಾಡಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದಲ್ಲದೆ ಗುಂಡಿನ ಸದ್ದು ಕೂಡ ಜೈಲಿನಲ್ಲಿ ಕೇಳಿಬಂದಿದೆ. ಇದು ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಘಟನೆಯಾಗಿದೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

Articles You Might Like

Share This Article