ಕಾದ ಕಬ್ಬಿಣದ ದ್ರವ ಬಿದ್ದು 8 ಮಂದಿ ಕಾರ್ಮಿಕರಿಗೆ ಗಾಯ

Social Share

ಲೂದಿಯಾನ,ಜ.5- ಕಾರ್ಖಾನೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಮೈ ಮೇಲೆ ಬಿದ್ದಿದ್ದರಿಂದ ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಪಂಜಾಬ್‍ನ ಲೂದಿಯಾನದ ಸಹ್ನೆವಾಲ್‍ನಲ್ಲಿರುವ ಕಬ್ಬಿಣದ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮೇಲೆ ಕುಲುಮೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಬಿದ್ದಿದೆ.

ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಜೀನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊರೊನಾ ಉಪತಳಿ ಕ್ರಾಕೆನ್‍ ಕುರಿತು ಇಸ್ರೆಲ್‍ ತಜ್ಞ ವೈದ್ಯರ ಎಚ್ಚರಿಕೆ

ಸಹ್ನೆವಾಲ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸುಖದೇವ್‍ಸಿಂಗ್, ಸ್ಥಳಕ್ಕೆ ಭೇಟಿ ನೀಡಿದ್ದು ಕಾರ್ಮಿಕರ ಮೇಲೆ ಕಬ್ಬಿಣದ ದ್ರವ ಬೀಳಲು ಹೇಗೆ ಸಾಧ್ಯ ಎಂಬ ವಿಷಯವನ್ನು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Eight, labourers, suffer, burn, injuries, molten iron, falls,

Articles You Might Like

Share This Article