ಜೋಹಾನ್ಸ್‍ಬರ್ಗ್,ಜ.30-ಹುಟ್ಟುಹಬ್ಬದ ಪಾರ್ಟಿ ಮೇಳೆ ಬಂದೂಕುಧಾರಿಗಳ ನಡೆಸಿದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಪೋರ್ಟ್ ಎಲಿಜಬೆತ್‍ನ ದಕ್ಷಿಣ ಬಂದರು ನಗರವಾದ ಗೆಬರ್ಹಾದಲ್ಲಿ ಭಾನುವಾರ ಸಂಜೆ ಮನೆ ಮಾಲೀಕರು ಹುಟ್ಟು ಹಬ್ಬದ ಸಂಭ್ರದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಎಂಟ್ರಿಯಾದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಮನೆ ಮಾಲೀಕರು ಬಲಿಯಾಗಿದ್ದಾರೆ. ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಶಾರ್ಜಾದಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಇಡಿ ಜಗತ್ತಿನಲ್ಲೇ ಅತಿ ಹೆಚ್ಚು ಗುಂಡಿನ ದಾಳಿಗಳು ನಡೆಯುವುದು ದಕ್ಷಿಣಾ ಆಫ್ರಿಕಾದಲ್ಲಿ ಎನ್ನುವುದು ವಿಶೇಷವಾಗಿದೆ. ಗುಂಪು ಹಿಂಸಾಚಾರ ಮತ್ತು ಮದ್ಯಪಾನದಿಂದ ಉತ್ತೇಜಿಸಲ್ಪಟ್ಟು ಗುಂಡಿನ ದಾಳಿಗಳು ನಡೆಯುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.
ದಕ್ಷಿಣ ಆಫ್ರಿಕಾವು ಕಳೆದ ವರ್ಷ ಜೋಹಾನ್ಸ್‍ಬರ್ಗ್‍ನಲ್ಲಿ ಮತ್ತು ಪೂರ್ವ ನಗರವಾದ ಪೀಟರ್‍ಮರಿಟ್ಜ್‍ಬರ್ಗ್‍ನಲ್ಲಿನ ಕಾರ್ಮಿಕ ವರ್ಗದ ಉಪನಗರಗಳಲ್ಲಿನ ಪ್ರತ್ಯೇಕ ಬಾರ್‍ಗಳಲ್ಲಿ ಸುಮಾರು ಎರಡು ಡಜನ್‍ಗೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿತ್ತು.
Eight, shot, dead, birthday party, South Africa,