ಮುಂಬೈ,ಜ.17- ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೆ ಎರಡು ದಿನಗಳಿರುವಾಗ, ಮಾಜಿ ಮುಖ್ಯಮಂತ್ರಿ ಹಾಗೂ ಬಾಳಾಸಾಹೇಬ್ ಶಿವಸೇನೆ ಬಣದ ಮುಖ್ಯಸ್ಥ ಉದ್ಧವ್ಠಾಕ್ರೆ ಮನೆ ಮುಂಭಾಗ ಭಾರೀ ಕಟೌಟ್ಗಳನ್ನು ಹಾಕುವ ಮೂಲಕ ಶಿಥಲ ಸಮರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಲಾಗಿದೆ.
ಉದ್ಧವ್ ಠಾಕ್ರೆ ಮನೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ, ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ದೊಡ್ಡ ಗಾತ್ರದ ಕಟೌಟ್ಗಳನ್ನು ಹಾಕಲಾಗಿದೆ.
ಪ್ರಧಾನಿ ಭೇಟಿ ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ನೈತಿಕ ಬಲ ತಂದುಕೊಡಲಿದೆ ಮತ್ತು ಮುಂದಿನ ದಿನಗಳಲ್ಲಿ ನಡೆಯುವ ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿದೆ. ಶಿವಸೇನೆ ಮತ್ತು ಬಿಜೆಪಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸಲಿದೆ ಎಂದು ಬಿಜೆಪಿ ನಾಯಕರು ವಿಶ್ಲೇಷಿಸಿದ್ದಾರೆ.
23 ಲಕ್ಷ ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ರಾಜಮನೆತನದ ಉದ್ಯೋಗಿ
ಮಹಾನಗರ ಪಾಲಿಕೆಯಲ್ಲಿ ಈವರೆಗೂ ಶಿವಸೇನೆ ಹಿಡಿತ ಸಾಧಿಸಿತ್ತು. ಈಗ ಶಿವಸೇನೆ ಬಂಡಾಯ ಬಣ ಮತ್ತು ಬಿಜೆಪಿ ಜೊತೆಯಾಗಿ ಹಿಡಿತ ಸಾಧಿಸಲು ಯತ್ನಿಸಿವೆ. ಅವಧಿ ಮುಗಿಯುತ್ತಿರುವುದರಿಂದ ಮಾರ್ಚ್ನಲ್ಲಿ ಪಾಲಿಕೆಗೆ ಚುನಾವಣೆ ನಡೆಯಲಿದೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಉಪನಗರ ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಮನೆಯ ಸಮೀಪ ದೊಡ್ಡ ಗಾತ್ರದ ಕಟ್ಔಟ್ಗಳನ್ನು ಹಾಕಲಾಗಿದೆ.
ಕಳೆದೊಂದು ವರ್ಷದಿಂದ ಚೀನಾದಲ್ಲಿ ಕ್ಷೀಣಿಸುತ್ತಿದೆ ಜನಸಂಖ್ಯೆ ..!
ಪ್ರಧಾನಿ ಅವರು ವಿವಿಧ ಯೋಜನೆಗಳ ಶಂಕುಸ್ಥಾಪನೆ, ಎರಡು ಮೆಟ್ರೋ ಮಾರ್ಗಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗುರುವಾರ ಪ್ರಧಾನಿ ಮೋದಿ ಮುಂಬೈಗೆ ಭೇಟಿ ನೀಡುತ್ತಿದ್ದಾರೆ.
Eknath Shinde, cut outs, Uddhav Thackeray, residence,