ನವದೆಹಲಿ,ಡಿ.29- ದೇಶೀಯ ವಲಸಿಗರು ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕೇಂದ್ರ ಚುನಾವಣಾ ಆಯೋಗ, ಮೂಲ ಮಾದರಿಯ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಸಜ್ಜುಗೊಳಿಸಿದ್ದು, ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಕ್ಕೆ ಜನವರಿ 16ರಂದು ಪ್ರಾತ್ಯಕ್ಷಿಕೆ ಆಯೋಜಿಸಿದೆ.
ದೂರದ ಒಂದು ಮತಗಟ್ಟೆಯಲ್ಲಿ ಕುಳಿತ ಚುನಾವಣಾಧಿಕಾರಿ ಏಕಕಾಲಕ್ಕೆ 72 ಮತ ಕ್ಷೇತ್ರಗಳನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಈ ಮತಯಂತ್ರ ಹೊಂದಿದೆ. ಸಾರ್ವಜನಿಕ ವಲಯದ ಉದ್ಯಮ ಅಭಿವೃದ್ಧಿ ಪಡಿಸಿರುವ ಬಹು ಕ್ಷೇತ್ರೀಯ ರಿಮೋಟ್ ಕಂಟ್ರೋಲ್ ಮತಯಂತ್ರ ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನಾಸ್ತ್ರ ಜಾರಿ..?
ಯುವಕರು ಮತ್ತು ನಗರ ಪ್ರದೇಶಗಳನ್ನು ನಿರ್ದಿಷ್ಟ ಪಡಿಸಿ ರಿಮೋಟ್ ಮತಯಂತ್ರವನ್ನು ರೂಪಿಸಲಗಿದೆ. ಪ್ರಾಯೋಗಿಕ ಹಂತದ ಫಲಿತಾಂಶ ಆಧರಿಸಿ ನಂತರ ಅದನ್ನು ವಿಸ್ತರಣೆ ಮಾಡಲಾಗುವುದು. ವಲಸಿಗರು ಮತದಾನದಲ್ಲಿ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಪ್ರಜಾಪ್ರಭುತ್ವವನ್ನು ಸಂಭ್ರಮಿಸಲು ನೂತನ ವ್ಯವಸ್ಥೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಗಡಿ ವಿವಾದ ಕುರಿತು ಸಿಎಂಗೆ ಬೊಮ್ಮಾಯಿಯಿಗೆ ಡಿಕೆಶಿ ಸವಾಲ್
ರಿಮೋಟ್ ಮತಯಂತ್ರದ ಬಳಕೆ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಲು ಮತ್ತು ಮಾಹಿತಿ ನೀಡಲು ಜನವರಿ 6ರಂದು ಸಭೆ ಕರೆಯಲಾಗಿದೆ. ಕಾನೂನಾತ್ಮಕ, ಆಡಳಿತಾತ್ಮ ಮತ್ತು ತಾಂತ್ರಿಕ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
Election Commission, Develops, Remote, Voting, Machine,