ಚುನಾವಣೆ ಆಯೋಗದ ಸೂಚನೆ ಪಾಲಿಸದ ಗುಜರಾತ್ ಅಧಿಕಾರಿಗಳು

Social Share

ನವದೆಹಲಿ, ಅ.22- ವಿಧಾನಸಭೆ ಚುನಾವಣೆಗೂ ಮುನ್ನವೇ ಧಿಅಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತ ಅನುಪಾಲನಾ ವರದಿಯನ್ನು ಕಳುಹಿಸಲು ಗುಜರಾತ್ ಸರಕಾರದ ಅಧಿಕಾರಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಗುಜರಾತ್ ಸರ್ಕಾರದ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ವಿವರಣೆ ಕೇಳಿದೆ.

ಗುಜರಾತ್ ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಬರೆದಿರುವ ಚುನಾವಣಾ ಆಯೋಗ ಕೆಲವು ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಬಗ್ಗೆ ಅನುಸರಣೆ ವರದಿಗಳನ್ನು ಕಳುಹಿಸಲು ವಿಫಲರಾಗಿರುವ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದೆ.

ನಿಗದಿತ ಅವಧಿ ಮುಗಿದ ನಂತರವೂ ಸಹ ಅನುಸರಣೆ ವರದಿ ಕಳುಹಿಸದಿರುವ ಸಂದರ್ಭಗಳ ಕುರಿತು ವಿವರಣೆ ನೀಡಲು ಪತ್ರದಲ್ಲಿ ಸೂಚಿಸಲಾಗಿದೆ. ವಿಧಾನಸಭೆಗೆ ಚುನಾವಣೆ ನಡೆಯುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‍ಗೆ ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆಗೆ ಸಂಬಂಧಿಸಿದಂತೆ ಆಯೋಗ ಎರಡು ಸರ್ಕಾರಗಳಿಗೆ ಸೂಚನೆ ನೀಡಿ ಪತ್ರ ಬರೆದಿತ್ತು.

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ಹಿಮಾಚಲ ಪ್ರದೇಶಕ್ಕೆ ನವೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಗುಜರಾತ್ ಚುನಾವಣೆಯ ದಿನಾಂಕಗಳು ಇನ್ನೂ ಘೋಷಣೆಯಾಗಬೇಕಿದೆ. ತವರು ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗವು ಎರಡು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಇಂತಹ ನಿರ್ದೇಶನಗಳನ್ನು ಆಯೋಗ ನೀಡಲಿದೆ. ಗುಜರಾತ್ ಸರ್ಕಾರ ಆಯೋಗದ ಸೂಚನೆ ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ ಸಂಕಷ್ಟ

Articles You Might Like

Share This Article