ಬೆಂಗಳೂರು,ಮಾ.19- ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ರಾಜ್ಯ ಚುನಾವಣಾ ಆಯೋಗವು ಮತದಾರರಿಗೆ ಆಮಿಷವೊಡ್ಡುವವ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 16ನೇ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಿದ್ದು, ಮೇ 2ನೇ ವಾರದ ಅಂತ್ಯಕ್ಕೆ ಮತದಾನ ನಡೆದು ಮೂರನೇ ವಾರದಲ್ಲಿ ಇಡೀ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದೀಗ ಚುನಾವಣಾ ಆಯೋಗವು ಕೇಂದ್ರ ಆಯೋಗದ ನಿರ್ದೇಶನದಂತೆ ಅಗತ್ಯ ಪೂರ್ವ ಸಿದ್ದತೆ ಗಳನ್ನು ಕೈಗೊಂಡಿದ್ದು, ಮತದಾರರಿಗೆ ಆಮಿಷ, ಆಸೆವೊಡ್ಡುವವರ ಮೇಲೆ ನಿಗಾವಹಿಸಿದೆ.
ಅಮಿತ್ ಶಾ ಭೇಟಿ ಮಾಡಿದ ರಮೇಶ ಜಾರಕಿಹೊಳಿ
ರಾಜ್ಯ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಇದುವರೆಗೂ ರಾಜ್ಯದ ವಿವಿಧೆಡೆ ಒಟ್ಟು 80.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ 1.21 ಕೋಟಿ ನಗದು, 2.66 ಕೋಟಿ ಮೌಲ್ಯದ ಮದ್ಯ, 1.88 ಕೋಟಿ ಮೌಲ್ಯದ ಮಾದಕವಸ್ತುಗಳು, 1.87 ಕೋಟಿ ಮೌಲ್ಯದ ಚಿನ್ನ, 80 ಲಕ್ಷ ಮೊತ್ತದ ಬೆಳ್ಳಿ, ಸೀರೆ, ಕುಕ್ಕರ್, ಲ್ಯಾಪ್‍ಟಾಪ್ ಸೇರಿದಂತೆ ರಾಜ್ಯಾದ್ಯಂತ 9.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಸಂಗ್ರಹಿಸಿಟ್ಟಿದ್ದ ಕುಕ್ಕರ್, ಬ್ಯಾಗ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮತದಾರರಿಗೆ ಹಂಚಲು ಅಕ್ಕಿ ಚೀಲ ಸಂಗ್ರಹದ ಶಂಕೆ ಹಿನ್ನೆಲೆ ಶಿವಾಜಿನಗರದ ನೋವಾ ರಸ್ತೆಯಲ್ಲಿರುವ ರೌಡಿಶೀಟರ್ ಇಸ್ತಿಯಾಖ್ ಕಚೇರಿ ಮೇಲೆ ಪೆÇಲೀಸರು ದಾಳಿ ನಡೆಸಿದ್ದು ಕಚೇರಿಯಲ್ಲಿದ್ದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಹಿನ್ನೆಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ಎಂಎಸ್‍ಐಎಲ್ ಶಾಪ್‍ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಲಾಗಿದ್ದು ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 22.5 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.
ದಾಖಲೆ ಪುಸ್ತಕದಲ್ಲಿದ್ದ ಲೆಕ್ಕಕ್ಕಿಂತ ಹೆಚ್ಚು ಮದ್ಯ ಸಂಗ್ರಹ ಹಿನ್ನೆಲೆ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ. ಮತ್ತು ಅಬಕಾರಿ ಪೊಲೀಸರು ವೇಣು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ತಂಬಾಕು ಸಂಗ್ರಹ, ಮೊಬೈಲ್ ಬಳಕೆ ಆರೋಪ ಹಿನ್ನೆಲೆ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. 50 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಚೆಕ್‍ಫೋಸ್ಟ್‍ಗಳ ಮೇಲೆ ಹದ್ದಿನ ಕಣ್ಣು:
ಇದರ ಜೊತೆಗೆ ಚುನಾವಣಾ ಆಯೋಗ ಕರ್ನಾಟಕದಿಂದ ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗಡಿಭಾಗದ ಚೆಕ್‍ಫೋಸ್ಟ್‍ಗಳ ಮೇಲೆ ತೀವ್ರ ನಿಗಾವಹಿಸಿದೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕಲಬುರಗಿ, ಬೀದರ್, ಬಳ್ಳಾರಿ, ಕೋಲಾರ, ದೊಡ್ಡಬಳ್ಳಾಪುರ ಹೀಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಸೇರಿದಂತೆ ಮತ್ತಿತರ ಕಡೆಯಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ
ಪ್ರತಿ ಚೆಕ್‍ಫೋಸ್ಟ್‍ಗೂ ವಿಶೇಷ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಇಲ್ಲಿ ಒಂದು ಕಿ.ಮೀ ವ್ಯಾಪ್ತಿಯ ಸುತ್ತಳತೆಯಲ್ಲಿ ಸೆರೆ ಹಿಡಿಯುವ ಸಿಸಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ.
ವಿಶೇಷವಾಗಿ ಬಾರ್, ರೆಸ್ಟೋರೆಂಟ್, ಎನ್‍ಎಸ್‍ಐಎಲ್ ಮಳಿಗೆಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ. ಪ್ರತಿ ತಿಂಗಳು ಎಷ್ಟು ಮದ್ಯ ಸಂಗ್ರಹಿಸಲಾಗಿತ್ತು. ಪ್ರಸ್ತುತ ಇರುವ ಸಂಗ್ರಹದ ಬಗ್ಗೆ ಲೆಕ್ಕ ಕೊಡುವಂತೆಯೂ ಸೂಚಿಸಲಾಗಿದೆ.
ಒಂದು ವೇಳೆ ಹೆಚ್ಚುವರಿ ಮದ್ಯ ಸಂಗ್ರಹಿಸಿದ್ದರೆ ಮುಲಾಜಿಲ್ಲದೆ ವಶಪಡಿಸಿಕೊಳ್ಳಲು ಆಯೋಗ ಅಕಾರಿಗಳಿಗೆ ತಾಕೀತು ಮಾಡಿದೆ. ಜಿಲ್ಲಾಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಇಒ, ಡಿವೈಎಸ್ಪಿ, ಇನ್‍ಸ್ಪೆಕ್ಟರ್ ಹಂತದವರೆಗಿನ ಅಧಿಕಾರಿಗಳು ಯಾವುದೇ ಪಕ್ಷದ ಪರ ಇಲ್ಲವೇ ರಾಜಕೀಯ ಮುಖಂಡರ ಪರ ಕೆಲಸ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದೆ.
ಹೀಗೆ ಈ ಬಾರಿಯ ಚುನಾವಣೆಯನ್ನು ಮುಕ್ತ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಆಯೋಗ ಎಲ್ಲ ರೀತಿಯಲ್ಲೂ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ.
Election, Commission, makes, seizures, totalling, ₹92.97 crore,