2023ರ ಚುನಾವಣೆಗೆ 5.09 ಕೋಟಿ ಮತದಾರರು: ಕರಡು ಪಟ್ಟಿ ಪ್ರಕಟ

Social Share

ಬೆಂಗಳೂರು,ನ.22- ರಾಜ್ಯ ಇನ್ನೇನು ಚುನಾವಣೆ ಹೊಸ್ತಿಲಲ್ಲಿ ಇದೆ. ಇತ್ತ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ. ಚುನಾವಣಾ ಆಯೋಗವೂ ಭರದಿಂದ ಸಿದ್ಧತೆ ಕೈಗೆತ್ತಿಕೊಂಡಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ
ಪ್ರಕಟಿಸುವ ಮೂಲಕ ಚುನಾವಣಾ ತಯಾರಿ ಆರಂಭಿಸಿದೆ.

ಕರ್ನಾಟಕ ಇದೀಗ ಚುನಾವಣೆಯ ಹೊಸ್ತಲಲ್ಲಿ ಇದೆ. ಇನ್ನೇನು ಐದಾರು ತಿಂಗಳಲ್ಲಿ ರಾಜ್ಯ ಚುನಾವಣೆ ಎದುರಿಸಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಭರ್ಜರಿಯಾಗಿ ಆರಂಭಿಸಿವೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ರ್ಯಾಲಿ, ಪಾದಯಾತ್ರೆ, ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುರು ಮಾಡಿವೆ.

ಇತ್ತ ಚುನಾವಣಾ ಆಯೋಗವೂ ತನ್ನ ಚುನಾವಣಾ ತಯಾರಿಯನ್ನು ಪ್ರಾರಂಭಿಸಿದೆ. ಚುನಾವಣೆ ಮುನ್ನ ಕೈಗೊಳ್ಳಬೇಕಾದ ಸಕಲ ಪೂರ್ವತಯಾರಿಯನ್ನು ಆರಂಭಿಸಿದೆ. ಇದರ ನಿಮಿತ್ತ ರಾಜ್ಯದ ಎಲ್ಲಾ 224 ವಿಧಾನಸಭೆ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಆ ಮೂಲಕ ಹೊಸ ಮತದಾರರ ಸೇರ್ಪಡೆ ಕಾರ್ಯವನ್ನು ಆರಂಭಿಸಿದೆ.

ಮತದಾರರ ಪಟ್ಟಿ ಅಕ್ರಮ : ನಾಳೆ ಕಾಂಗ್ರೆಸ್‍ನಿಂದ ಆಯೋಗಕ್ಕೆ ದೂರು

ಕರಡು ಮತದಾರರ 11 ಪಟ್ಟಿ ಪ್ರಕಟಿಸಿದ್ದು, ಡಿಸೆಂಬರ್ 8ರ ವರೆಗ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ.

ಡಿಸೆಂಬರ್ 26ರೊಳಗೆ ಆಕ್ಷೇಪಣೆಗಳ ವಿಲೇವಾರಿ ಮಾಡಿ 2023ರ ಜನವರಿ 5ಕ್ಕೆ ಮತದಾರರರು ತಮ್ಮ ಹೆಸರನ್ನು ಈ ವೆಬ್‍ಸೈಟ್‍ನಲ್ಲಿ www/ceokarnatka.gov.in ಪರಿಶೀಲಿಸಬಹುದಾಗಿದೆ. ಹೆಸರು ಇಲ್ಲದೇ ಇರೋ ಮತದಾರರು ಫಾರ್ಮ್ 6 ರ ಮೂಲಕ ಸೇರ್ಪಡೆ ಆಗಬಹುದು.

ಗರುಡ ಆಪ್ ಅಥವಾ ಸ್ಮಾರ್ಟ್ ಫೋನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, Voter Helpline Mobile App  ಡೌನ್ ಲೋಡ್ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರಿದೆಯಾ ಅಂತ ಪರೀಕ್ಷೆ ಮಾಡಿಕೊಳ್ಳಬಹುದು.

27.08 ಲಕ್ಷ ಮತದಾರರಿಗೆ ಕೊಕ್: 27.08 ಲಕ್ಷ ಮತದಾರರನ್ನು ವಿವಿಧ ಕಾರಣಗಳಿಗೆ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಹುಬ್ಬೇರಿಸುವಂತೆ ಮಾಡಿದೆ. ಮತ ಪರಿಷ್ಕರಣೆ ವೇಳೆ ಫೋಟೋ ಸಿಮಿಲರ್ ಎಂಟೀಸ್, ಡೆಮೊಗ್ರಾಫಿಕ್ ಸಿಮಿಲರ್ ಎಂಟ್ರಿಸ್, ಮತದಾರರ ನಿಧನ, ವಿಳಾಸ ಬದಲಾವಣೆ ಮುಂತಾದ ಕಾರಣಗಳಿಗೆ ಮತದಾರರನ್ನು ಕೈ ಬಿಡಲಾಗಿದೆ. 11.13 ಲಕ್ಷ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅಗ್ನಿಪರೀಕ್ಷೆಯಾಗಲಿರುವ ಪೂರ್ವಭಾವಿ ಸಭೆ

17 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಗೆ ಸೇರ್ಪಡೆ ಆಗಬಹುದು. ಒಂದು ವರ್ಷ ಮೊದಲೇ ಪಟ್ಟಿಗೆ ಸೇರ್ಪಡೆ ಆಗಬಹುದು. ಆದ್ರೆ ಜನವರಿ 1ಕ್ಕೆ 18 ವರ್ಷ ತುಂಬಿದರೆ ಮತದಾನಕ್ಕೆ ಅವಕಾಶ ಇದೆ.
ಜನವರಿ 1ರ 2023ರೊಳಗೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ಸೇರ್ಪಡೆ ಆಗಬಹುದು. ಮತದಾರರು ಕೂಡಲೇ ವೆಬ್ ಸೈಟ್ ಪರೀಕ್ಷೆ ಮಾಡಿಕೊಳ್ಳಿ. 2022 ಅಂತಿಮ ಮತದಾರರ ಪಟ್ಟಿಯಲ್ಲಿ 5.25 ಕೋಟಿ ಮತದಾರರು ಇದ್ದರು.

ಪರಿಷ್ಕøತ ಕರಡು ಮತದಾರರ ಪಟ್ಟಿಯಲ್ಲಿ 5.09ಕೋಟಿ ಮತದಾರರ ಸಂಖ್ಯೆ ಇದೆ. ಇದರಲ್ಲಿ ಪುರುಷ ಮತದಾರರು 2,56,85,954, ಮಹಿಳೆಯರು 2,52,11,218, ಇತರರು 4,490 ಇತರ ಮತದಾರರು ಇದ್ದಾರೆ.

ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

ಬಾಗಲಕೋಟೆ, ರಾಯಚೂರು, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಮೈಸೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ.

2022ರ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು ಮತಗಟ್ಟೆ 58,179 ಇತ್ತು. ಕರಡು ಮತದಾರರ ಪಟ್ಟಿ 2023ರಲ್ಲಿ ಒಟ್ಟು ಮತಗಟ್ಟೆ ಸಂಖ್ಯೆ 58,282 ಏರಿಕೆ ಆಗಿದೆ. 225 ಮತಗಟ್ಟೆ ಸೇರ್ಪಡೆ ಮಾಡಲಾಗಿದೆ. 122ಮತಗಟ್ಟೆಗಳನ್ನ ವಿಲೀನ ಮಾಡಲಾಗಿದೆ. ಒಟ್ಟಾರೆ 103 ಮತಗಟ್ಟೆ ಹೆಚ್ಚಳ ಮಾಡಲಾಗಿದೆ.

Election, Commission, published, Draft, voters, list,

Articles You Might Like

Share This Article