ಬೆಂಗಳೂರು,ಜ.17- ಎಂಜಿನಿಯರ್ಗಳ ಬೇಜವಬ್ದಾರಿತನದಿಂದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ-ಮಗು ಮೃತಪಟ್ಟ ಘಟನೆ ನಡೆದಿದ್ದರೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತನ ಮಾತ್ರ ದೂರವಾಗಿಲ್ಲ.
ರಸ್ತೆ ಬದಿಯ ವಿದ್ಯುತ್ ಕಂಬವೊಂದು ಈಗಲೋ ಆಗಲೋ ಉರುಳಿಬೀಳುವಂತೆ ವಾಲಿಕೊಂಡಿದ್ದರೂ ಬೆಸ್ಕಾಂ ಸಿಬ್ಬಂದಿಗಳ ಕಣ್ಣಿಗೆ ಮಾತ್ರ ಇದು ಕಾಣದಿರುವುದು ದುರಂತವೇ ಸರಿ.
ಹೆಣ್ಣೂರು-ಕೊತ್ತನೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಸಂಪೂರ್ಣವಾಗಿ ವಾಲಿಕೊಂಡಿದೆ. ಈ ಕುರಿತಂತೆ ಸ್ಥಳೀಯರು ಬೆಸ್ಕಾಂಗೆ ದೂರು ನೀಡಿದ್ದರೂ ಸಿಬ್ಬಂದಿಗಳು ಮಾತ್ರ ಘಟನಾ ಸ್ಥಳಕ್ಕೆ ಆಗಮಿಸದೆ ಬೇಜವಬ್ದಾರಿತನ ಪ್ರದರ್ಶಿಸಿದ್ದಾರೆ. ವಾಲಿರುವ ಕಂಬದ ಕೆಳಗೆ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
ಮೆಟ್ರೋ ಪಿಲ್ಲರ್ ಕುಸಿತಕ್ಕೆ ಎಂಜಿನಿಯರ್ಗಳ ನಿರ್ಲಕ್ಷ್ಯವೇ ಕಾರಣ
ಒಂದು ವೇಳೆ ವಿದ್ಯುತ್ ಕಂಬ ಕುಸಿದುಬಿದ್ದರೆ ಭಾರಿ ಅನಾಹುತ ಸಂಭವಿಸುವುದರಲ್ಲಿ ಯಾವುದೆ ಅನುಮಾನವಿಲ್ಲ.
ಪರಿಸ್ಥಿತಿ ಹೀಗಿದ್ದರೂ ಬೆಸ್ಕಾಂನವರು ವಾಲಿರುವ ಕಂಬ ಸರಿಪಡಿಸದೆ ಬೇಜವಬ್ದಾರಿತನ ಪ್ರದರ್ಶಿಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
electric pole, BESCOM, staff, Hennur,