ವಿದ್ಯುತ್ ಅವಘಡಕ್ಕೆ ಮೂವರು ಬಲಿ

Social Share

ಟಿ,ನರಸೀಪುರ, ನ.6- ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಮೂವರು ದುರಂತ ಸಾವನ್ನಪ್ಪಿರುವ ಘಟನೆ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ತಾಲೂಕಿನ ನಿಲಸೋಗೆ ಗ್ರಾಮದ ರಾಚೇಗೌಡ ಎಂಬುವರ ಗದ್ದೆಯಲ್ಲಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗ್ರಾಮದ ರಾಚೇಗೌಡ (62), ಅವರ ಪುತ್ರ ಹರೀಶ್ (39) ಹಾಗೂ ಕೂಲಿ ಕಾರ್ಮಿಕ ಮಹದೇವಸ್ವಾಮಿ (40) ಎಂಬುವವರು ಸಾವನ್ನಪ್ಪಿದ್ದಾರೆ.

ಗ್ರಾಮದ ವೀರತ್ತ ಸ್ವಾಮಿ ಯವರ ಚೌಲ್ಟ್ರಿ ಪಕ್ಕದ ರಾಚೇಗೌಡರ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತದ ಫಸಲಿಗೆ ಇಂದು ಬೆಳಿಗ್ಗೆ ರಾಚೇಗೌಡ ಮತ್ತು ಅವರ ಪುತ್ರ ಹರೀಶ್ ಔಷಧ ಸಿಂಪಡಣೆ ಮಾಡಲು ಮಹದೇವಸ್ವಾಮಿ ಎಂಬ
ಕೂಲಿ ಕಾರ್ಮಿಕನನ್ನು ಕರೆದುಕೊಂಡು ಹೋಗಿದ್ದ ವೇಳೆ ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸಿ ಅದನ್ನು ಎತ್ತಲು ಮುಂದಾಗಿದ್ದಾರೆ.

ಬೆಂಗಳೂರಿಗೆ ಬಂದಿಳಿದ AICC ಅಧ್ಯಕ್ಷ ಖರ್ಗೆ, ಕಾಂಗ್ರೆಸ್‍ನಲ್ಲಿ ಹಬ್ಬದ ವಾತಾವರಣ

ಈ ಸಂಧರ್ಭ ತಂತಿಯಿಂದ ವಿದ್ಯುತ್ ಪ್ರವಹಿಸಿ ತೀವ್ರವಾಗಿ ಗಾಯಗೊಂಡ ಮೂವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ವಿದ್ಯುತ್ ಇಲಾಖೆಯವರು ಭೇಟಿ ನೀಡಿದ್ದು ,ಪರಿಶೀಲನೆ ನಡೆಸಿದ್ದಾರೆ.

Articles You Might Like

Share This Article