ಬೆಂಗಳೂರಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕಲ್ ಡಬ್ಬಲ್ ಡೆಕ್ಕರ್ ಬಸ್

Social Share

ಬೆಂಗಳೂರು,ಫೆ.20- ರಾಜಧಾನಿ ಬೆಂಗಳೂರು ಮಹಾ ಜನತೆಯ ಬಹು ದಿನಗಳ ಕನಸು ನನಸಾಗಾಲಿದೆ. ಶೀಘ್ರದಲ್ಲೇ ಡಬಲ್ ಡೆಕ್ಕರ್ ಬಸ್‍ನಲ್ಲಿ ಪ್ರಯಾಣಿಸುವ ಸೌಲಭ್ಯ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ದಶಕಗಳ ಹಿಂದೆಯೇ ಇವುಗಳನ್ನು ಸೇವೆಯಿಂದ ಹಿಂಪಡೆಯಲಾಗಿತ್ತು.

ಬೆಂಗಳೂರಿನ ಯುವ ಜನತೆಗೆ ಡಬಲ್ ಡೆಕ್ಕರ್ ಬಸ್‍ನಲ್ಲಿ ಸಂಚರಿಸಿದ ಅನುಭವವೇ ಇಲ್ಲ. ಇದೀಗ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ನೂತನವಾಗಿ ರಸ್ತೆಗೆ ಇಳಿಯಲಿರುವ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಮತ್ತೊಂದು ವಿಶೇಷತೆಯೂ ಇದೆ.

ಅದಾನಿ, ಅಂಬಾನಿ ಸಮಯಕ್ಕಿಂತ ನನ್ನ ಸಮಯ ಮೌಲ್ಯಯುತವಾಗಿದೆ : ರಾಮ್‍ದೇವ್

ಇವು ಸಾಮಾನ್ಯ ಡೀಸೆಲ್ ಚಾಲಿತ ಬಸ್‍ಗಳಲ್ಲ, ಎಲೆಕ್ಟ್ರಿಕ್ ಬಸ್‍ಗಳು. ಈ ಬಸ್‍ಗಳು ಮಾರ್ಚ್ ತಿಂಗಳಿನಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಈ ಕುರಿತಾಗಿ ಬಿಎಂಟಿಸಿ ಮೂಲಗಳು ಮಾಹಿತಿ ನೀಡಿದ್ದು, ಅಶೋಕ್ ಲೇಲ್ಯಾಂಡ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಫೆಬ್ರವರಿ ಅಂತ್ಯಕ್ಕೆ ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ
ಬಿಎಂಟಿಸಿ ಹಾಗೂ ಅಶೋಕ್ ಲೇಲ್ಯಾಂಡ್ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ 5 ಡಬಲ್ ಡೆಕ್ಕರ್ ಬಸ್‍ಗಳನ್ನು ಬೆಂಗಳೂರಿನ ರಸ್ತೆಗೆ ಇಳಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 10 ಕೋಟಿ ರೂ. ಮೊತ್ತ ಆಗಲಿದೆ.
ಸ್ವಿಚ್ ಇಐವಿ 22 ಬಸ್‍ಗಳು ಭಾರತದ ಮೊದಲ ಎಸಿ ಡಬಲ್ ಡೆಕ್ಕರ್ ಬಸ್ ಆಗಿದೆ.

ಈ ಮಾದರಿಯ ಬಸ್‍ಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ಮುಂಬೈನ ಸಾರ್ವಜನಿಕ ಸಾರಿಗೆ ಸಂಸ್ಥೆ ಬೆಸ್ಟ್ ಈಗಾಗಲೇ 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‍ಗಾಗಿ ಬೇಡಿಕೆ ಇಟ್ಟಿದೆ.

ಮೊದಲ ಹಂತದಲ್ಲಿ ಈಗಾಗಲೇ 22 ಬಸ್‍ಗಳು ಸಂಚರಿಸುತ್ತಿವೆ. ಹಾಗೆ ನೋಡಿದರೆ ಈ ಮಾದರಿಯ ಎಸಿ ಡಬಲ್ ಡೆಕ್ಕರ್ ಬಸ್ ತಯಾರಕ ಸಂಸ್ಥೆಗಳು ಯಾವುದೂ ಇಲ್ಲ. ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಕೂಡಾ ಸಮೀಪಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಆರಂಭವಾಗುವ ಮುನ್ನ ಬಸ್‍ಗಳ ಖರೀದಿ ಪ್ರಕ್ರಿಯೆ ಮುಗಿಸಲು ಬಿಎಂಟಿಸಿ ನಿರ್ಧರಿಸಿದೆ.

IAS-IPS ಅಧಿಕಾರಿಗಳ ಬೀದಿ ರಂಪಾಟ : ರೂಪಾ ಮತ್ತು ಸಿಂಧೂರಿಗೆ ನೋಟಿಸ್

ಬೆಂಗಳೂರಿಗೆ ಮೊದಲ ಡಬಲ್ ಡೆಕ್ಕರ್ ಬಸ್ ಮಾರ್ಚ್ ವೇಳಗೆ ಆಗಮಿಸಲಿದೆ. ಇನ್ನುಳಿದ ನಾಲ್ಕು ಬಸ್‍ಗಳು ಏಪ್ರಿಲ್ – ಮೇ ಒಳಗೆ ಆಗಮಿಸಲಿದೆ ಎಂದು ಬಿಎಂಟಿಸಿ (ಐಟಿ) ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ. ಮೊದಲ ಎಸಿ ಡಬಲ್ ಡೆಕ್ಕರ್ ಬಸ್ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಪ್ರಯಾಣಿಸಲಿದೆ.

ಈ ಬಸ್‍ನಲ್ಲಿ ಪ್ರಯಾಣಿಸಲು ಪ್ರಯಾಣಿಕರು ವೋಲ್ವೋ ವಜ್ರ ಬಸ್‍ಗೆ ಪಾವತಿ ಮಾಡುತ್ತಿರುವ ಟಿಕೆಟ್ ದರವನ್ನೇ ನಿಗದಿ ಮಾಡಲಾಗಿದೆ.

ಎಸಿ ಡಬಲ್ ಡೆಕ್ಕರ್ ಬಸ್‍ಗಳ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 250 ಕಿ. ಮೀ. ದೂರ ಸಾಗಲಿದೆ. ಈ ಬಸ್‍ನಲ್ಲಿ ಮುಂದೆ ಹಾಗೂ ಹಿಂದೆ ಎರಡೂ ಕಡೆ ಬಾಗಿಲು ಇರಲಿದೆ. ಮೇಲ್ಮಹಡಿ ಹತ್ತಲು 2 ಕಡೆ ಮೆಟ್ಟಿಲುಗಳು ಇರಲಿವೆ. ಜೊತೆಗೆ ಒಂದು ತುರ್ತು ನಿರ್ಗಮನ ದ್ವಾರವೂ ಇರಲಿದೆ. ಈ ಬಸ್‍ನಲ್ಲಿ 65 ಪ್ರಯಾಣಿಕರಿಗೆ ಸೀಟಿನ ವ್ಯವಸ್ಥೆ ಇದೆ.

Electrical, Double Decker, Bus, Bengaluru,

Articles You Might Like

Share This Article