ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಕರೆಂಟ್ ಶಾಕ್!

Social Share

ಬೆಂಗಳೂರು,ಡಿ.16- ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಹಲವಾರು ಎಸ್ಕಾಂಗಳು ವಿದ್ಯುತ ದರ ಏರಿಕೆಗೆ ಕೆಇಆರ್‍ಸಿಗೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುವಂತಾಗಿದೆ.

ಈ ವರ್ಷದಲ್ಲೇ ಈಗಾಗಲೇ ಮೂರು ಬಾರಿ ಕೆಇಆರ್‍ಸಿ ವಿದ್ಯುತ್ ದರ ಏರಿಕೆ ಮಾಡಿದ್ದು, ಈ ಬಾರಿಯೂ ವಿದ್ಯುತ್ ದರ ಪರಿಷ್ಕರಣೆ ಮಾಡಿದರೆ ಮತ್ತೆ ಗ್ರಾಹಕರಿಗೆ ಕರೆಂಟ್ ಶಾಕ್ ಹೊಡೆಯುವುದಂತೂ ಗ್ಯಾರಂಟಿಯಾಗಿದೆ.

ಐದು ಎಸ್ಕಾಂಗಳು ವಿದ್ಯುತ್ ದರ ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿ ಪ್ರತಿ ಯೂನಿಟ್‍ಗೆ ಸರಾಸರಿ 1.20 ರೂ. ಗಳಿಂದ 1.40 ಪೈಸೆಗೆ ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿರುವುದರಿಂದ ಮತ್ತೆ ವಿದ್ಯುತ್ ದರ ಹೆಚ್ಚಳವಾಗುವ ಬಗ್ಗೆ ಗುಮಾನಿ ಎದ್ದಿದೆ.

ಕುಕ್ಕರ್ ಬಾಂಬ್ ಪ್ರಕರಣ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್

ವಿದ್ಯುತ್ ಖರೀದಿ ಮತ್ತು ಸರಬರಾಜುಗಳು,ಸೋರಿಕೆ ಸಬ್ಸಿಡಿ ಒಳಗೊಂಡಂತೆ ವಿವಿಧ ಪ್ರಕಾರದ ವೆಚ್ಚವನ್ನು ಆಧರಿಸಿ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಕೆಇಆರ್‍ಸಿ ಕರೆಂಟ್ ಶಾಕ್ ನೀಡುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ಉಲ್ಬಣಗೊಂಡ ಡೆಂಘೀ; ಕಾಡುತ್ತಿದೆ ಝೀಕಾ ಸೋಂಕಿನ ಭೀತಿ

ಇಂಧನ ಸಚಿವ ಸುನಿಲ್ ಕುಮಾರ್ ಅವರು ಹೊಸ ವರ್ಷದ ಆರಂಭದಲ್ಲಿ ಹೆಚ್ಚಿರುವ ವಿದ್ಯುತ್ ದರವನ್ನು ಇಳಿಸುವ ಆಶ್ವಾಸನೆ ನೀಡಿದ್ದರೂ ಆದರೆ, ಇದೀಗ ಮತ್ತೆ ವಿದ್ಯುತ್ ದರ ಹೆಚ್ಚಿಸಲು ಮುಂದಾದರೆ ಜನರ ಭಾರಿ ಪ್ರತಿರೋಧ ಎದುರಿಸಬೇಕಾಗುತ್ತದೆ.

Electricity bills, likely, rise, Karnataka,

Articles You Might Like

Share This Article