ಬೆಳಗಾವಿ,ಡಿ.29-ರಾಜ್ಯದಲ್ಲಿ ತತ್ಕಾಲ್ ಯೋಜನೆಯಡಿ 68 ಸಾವಿರ ರೈತರ ಕೃಷಿ ಪಂಪ್ಸೆಟ್ಗಳಿಗೆ ಟ್ರಾನ್ಸ್ಫಾರ್ಮರ್ ಒದಗಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನಿಲ್ ಕುಮಾರ್ ವಿಧಾನಸಭೆಗಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಂ.ವಿ.ವೀರಭದ್ರಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತತ್ಕಾಲ್ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯಲು ರೈತರು ಹತ್ತು ಸಾವಿರ ರೂ. ಪಾವತಿಸಬೇಕಿದೆ. ಆದರೆ, ವಿದ್ಯುತ್ ಕಂಪನಿಗಳು ಒಂದೂವರೆ ಲಕ್ಷ ರೂ ವೆಚ್ಚ ಭರಿಸಬೇಕು ಎಂದರು.
ರಾಜ್ಯದಲ್ಲಿ 2014 ರೈತರಿಗೆ ತತ್ಕಾಲ್ ಯೋಜನೆಯಡಿ ಟ್ರಾನ್ಸ್ಫಾರ್ಮರ್ ಒದಗಿಸಬೇಕಾಗಿದ್ದು, ಹಣಕಾಸಿನ ಲಭ್ಯತೆ ಆಧಾರದ ಮೇಲೆ ಶೀಘ್ರವಾಗಿ ಒದಗಿಸುವ ಭರವಸೆ ನೀಡಿದರು.
ಕನ್ಯೆ ಹುಡುಕಾಟದಲ್ಲಿ ರಾಹುಲ್ ಗಾಂಧಿ, ಮನದನ್ನೆ ಹೇಗಿರಬೇಕಂತೆ ಗೊತ್ತಾ..?
ಅಕ್ರಮ ಕೃಷಿ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಯೋಜನೆ ಮುಂದುವರೆದಿದೆ. ಮಧುಗಿರಿ ಕ್ಷೇತ್ರದಲ್ಲಿ 2014ರಿಂದ 2022ರ ನವೆಂಬರ್ ವರೆಗೆ ತತ್ಕಾಲ್ ಯೋಜನೆಯಡಿ 666 ರೈತರು ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುಲು ಅರ್ಜಿ ಸಲ್ಲಿಸಿದ್ದರು.
ಈಗಾಗಲೇ 532 ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದಿರುವ 134 ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಮೂಲಸೌಕರ್ಯ ರಚಿಸಿಕೊಂಡು ಜೇಷ್ಠತೆ ಆಧಾರದ ಮೇಲೆ ಪರಿವರ್ತಕ ಒದಗಿಸಿ ವಿದ್ಯುತ್ ಸಂರ್ಪಕ ಕಲ್ಪಿಸಲಾಗುವುದು ಎಂದು ಹೇಳಿದರು.
Electricity, connection, farmers, pump sets, Minister Sunil Kumar,