ಬೆಂಗಳೂರು, ಡಿ.5- ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಹಲವಾರು ಬೇಡಿಕೆಗಳನ್ನು ಅಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ ಮೀಟರ್ ಮತ್ತು ಉಪಕರಣಗಳನ್ನು ಕುತ್ತಿಗೆಗೆ ಹಾಕಿಕೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಸಿ.ರಮೇಶ್ ಮಾತನಾಡಿ, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದು, ಅವರನ್ನು ನಂಬಿಕೊಂಡು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸಣ್ಣ ಸಣ್ಣ ಕಾಮಗಾರಿಗಳನ್ನು ಕ್ರೋಢೀಕರಿಸಿ ಬೃಹತ್ ಟೆಂಡರ್ ಕರೆದಿರುವುದು ದುರದೃಷ್ಟಕರ.
ಕೂಡಲೇ ಸರ್ಕಾರ ಈ ಆದೇಶವನ್ನು ರದ್ದುಪಡಿಸಿ 1 ಲಕ್ಷದಿಂದ 5 ಲಕ್ಷದ ವರೆಗಿನ ಕಾಮಗಾರಿಯನ್ನು ಗುತ್ತಿಗೆದಾರರಿಗೆ ನೇರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿಗೆ ಕಗ್ಗಂಟಾದ ರೌಡಿ ಶೀಟರ್ ಗಳ ಸೇರ್ಪಡೆ ವಿವಾದ
ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ಬೆಳಕು ಯೋಜನೆಯಡಿ ಬೆಸ್ಕಾಂ ನೀಡಿರುವ ದರವನ್ನು ಎಲ್ಲಾ ಎಸ್ಕಾಂಗಳಿಗೂ ಜಾರಿಗೊಳಿಸಬೇಕು ಮತ್ತು ಬೆಳಕು ಯೋಜನೆ ಕಾಮಗಾರಿ ನಿರ್ವಹಿಸಿರುವ ಬಿಲ್ಗಳಿಗೆ ಬಜೆಟ್ನಲ್ಲಿ ಅನುದಾನ ಒದಗಿಸಬೇಕು ಎಂದರು.
ಆಸ್ತಿ ಕಬಳಿಕೆಗೆ ಯತ್ನ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು
ಗ್ರಾಹಕರಿಗೆ ಅಧಿನಕೃತ ಬಡಾವಣೆಗಳಿಗೆ ಐಎಫ್ಎಸ್ಸಿ ಹೆಚ್ಚುವರಿಯಾಗಿ ಎಸ್ಕಾಂಗಳು ಸಂಗ್ರಹಿಸುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿರು ವುದರಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದರು.
ಮುಖ್ಯಮಂತ್ರಿಗಳು, ಇಂಧನ ಸಚಿವರು ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳನ್ನು ಕೂಡಲೇ ಪರಿಹಾರಿಸಬೇಕು ಎಂದು ಹೇಳಿದರು.
ಸಿದ್ರಾಮುಲ್ಲಾಖಾನ್ ಅಲ್ಲದೆ ಮತ್ತಿನ್ನೇನು : ಬಿಜೆಪಿ
ಪದಾಧಿಕಾರಿಗಳಾದ ಎಂ.ಎನ್.ರಮೇಶ್, ಊರ್ಬನ್ ಪಿಂಟೊ, ಚಂದ್ರಬಾಬು,ಅನ್ನರ್ ಮಿಯಾ, ಶಿವಾನಂದ್ ಬಾಲಪ್ಪನವರ್, ಚಂದ್ರಬಾಬು ಪಾಲ್ಗೊಂಡಿದ್ದರು.
#Electricity, #Contractors, #Protest, #Bengaluru,