93 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳು

Social Share

ಬೆಂಗಳೂರು,ನ.3- ತೆರಿಗೆ ಕಟ್ಟಿ ಎಂದು ಬೊಬ್ಬೆ ಹೊಡೆಯುವ ಬಿಬಿಎಂಪಿ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳೇ ಕೋಟಿ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿಗಳೇ ಸುಮಾರು 93 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗಗೊಂಡಿದೆ.

ಬಾಕಿ ಉಳಿಸಿಕೊಂಡಿರುವ ಕೋಟಿ ಕೋಟಿ ರೂ.ಗಳ ಬಿಲ್ ಅನ್ನು 7 ದಿನಗಳ ಒಳಗಾಗಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

ಬೆಸ್ಕಾಂ ಜಯನಗರ ಉಪವಿಭಾಗದಲ್ಲಿರುವ ಹಲವಾರು ಸರ್ಕಾರಿ ಕಚೇರಿಗಳು ಸುಮಾರು 93.70 ಕೋಟಿ ರೂ.ಗಳಷ್ಟು ವಿದ್ಯುತ್ ಬಾಕಿ ಉಳಿಸಿಕೊಂಡಿವೆ.ಜಯನಗರ, ಹೊಸೂರು ರಸ್ತೆ, ಇಸ್ರೋ ಲೇಔಟ್, ಜೆ.ಪಿ.ನಗರ, ಪದ್ಮನಾಭನಗರ, ಕತ್ರಿಗುಪ್ಪೆ, ಉತ್ತರಹಳ್ಳಿ ವ್ಯಾಪ್ತಿಯಲ್ಲಿನ ಕಚೇರಿಗಳು 2022ರ ಸೆಪ್ಟೆಂಬರ್ ಅಂತ್ಯದವರೆಗೆ 93.70 ಕೋಟಿ ರೂ, ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.

ನಟ ಶಶಿಕುಮಾರ್, ಮುದ್ದಹನುಮೇಗೌಡ ಸೇರಿ ಕಮಲ ಮುಡಿದ ಹಲವು ನಾಯಕರು

ಯಾವ ಯಾವ ಇಲಾಖೆ ಎಷ್ಟೇಷ್ಟು ಬಾಕಿ ಉಳಿಸಿಕೊಂಡಿವೆ:

ಬಿಬಿಎಂಪಿ – 43.36 ಕೋಟಿ ರೂ. ಜಲಮಂಡಳಿ – 47.37 ಕೋಟಿ ರೂ.
ಬಿಡಿಎ – 2.97 ಕೋಟಿ ರೂ. ಶುಲ್ಕ ಪಾವತಿಸಬೇಕಿದೆ ಎಂದು ಬೆಸ್ಕಾಂ ಮೂಲಗಳು ಮಾಹಿತಿ ನೀಡಿವೆ.

Articles You Might Like

Share This Article