ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ನೆಪದಲ್ಲಿ ವಂಚನೆ : ಆರೋಪಿ ಬಂಧನ

Social Share

ಬೆಂಗಳೂರು, ನ.19- ಮನೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿದ್ದಲ್ಲಿ ರಿಪೇರಿ ಮಾಡುವುದಾಗಿ ಆನ್‍ಲೈನ್‍ನಲ್ಲಿ ಪರಿಚಯವಾಗಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿ.ಇ.ಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹಳೇ ಗುರಪ್ಪನ ಪಾಳ್ಯ ಅಬ್ದುಲ್ ಸುಭಾನ (25) ಬಂಧಿತ ಆರೋಪಿ. ವಿಚಾರಣೆ ವೇಳೆಯಲ್ಲಿ ಇದೇ ರೀತಿಯಾಗಿ ಅಪರಾಧವೆಸಗಿದ ಇದೇ ಪೊಲೀಸ್ ಠಾಣೆಯ ಮೊತ್ತೊಂದು ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ ಫೋನ್, 4 ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡುವಲ್ಲಿ ಫೋಲೀಸರು ಯಶಸ್ವಿಯಾಗಿರುತ್ತಾರೆ.

ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

ಸಾರ್ವಜನಿಕರು ತಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಾದ ರೆಪ್ರೀಜರೇಟರ್, ಎಸಿ, ಟಿವಿ, ವಾಟರ್ ಫಿಲ್ಟರ್‍ನಂತಹ ಉಪಕರಣಗಳು ಕೆಟ್ಟ ಸಂದರ್ಭದಲ್ಲಿ ಗೂಗಲ್‍ಗೆ ತೆರೆಳಿ ಯಾವುದಾದರೂ ವೆಬ್‍ಸೈಟ್‍ನಲ್ಲಿ ಇರುವಂತಹ ಟೋಲ್ ಪ್ರೀ ನಂಬರ್‍ಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ದೂರುಗಳನ್ನು ತಿಳಿಸುತ್ತಿದ್ದರು.

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದ ಆರೋಪಿಯು ಕರೆ ಸ್ವೀಕರಿಸಿ, ತಾನು ಎಲ್‍ಪಿಜಿ ಕಂಪೆನಿಯ ಅಧಿಕೃತ ರಿಪೇರಿ ಮಾಡುವ ವ್ಯಕ್ತಿ ಎಂದು ಪರಿಚಯಿಸಿಕೊಂಡು ಮೊದಲಿಗೆ ರೆಫ್ರೀಜರೇಟರ್ ಫೋಟೋ ಕಳಿಸುವಂತೆ ಹೇಳುತ್ತಿದ್ದನು.

ನಿಮ್ಮ ಮನೆಗೆ ಸರ್ವೀಸ್‍ಗಾಗಿ ವ್ಯಕಿಯನ್ನು ಕಳುಹಿಸುವುದಾಗಿ ಹೇಳಿ ದೂರು ನೀಡಿದ ವ್ಯಕ್ತಿಗಳ ಮೊಬೈಲ್ ನಂಬರ್‍ಗಳನ್ನು ಪಡೆದುಕೊಂಡು ಎಲೆಕ್ಟ್ರಾನಿಕ್ ಉಪಕರಣದ ಫೋಟೋವನ್ನು ತೆಗೆದು ವಾಟ್ಸ್ ಅಪ್‍ನಲ್ಲಿ ಕಳುಹಿಸುವಂತೆ ತಿಳಿಸುತ್ತಿದ್ದನು.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ನಂತರ ಸಾರ್ವಜನಿಕರಿಗೆ ತಿಳಿಯದೇ ತನ್ನ ಹೆಸರನ್ನು ಮರೆಮಾಚಿ ಬೇರೆ ಹೆಸರು ಹೇಳಿ ರೆಫ್ರೀಜರೇಟರ್ ಬೋರ್ಡ್ ಹೋಗಿದೆ ಎಂದು ಹೇಳಿ ಅದಕ್ಕೆ ರೂ 8,000ದಿಂದ 9,000 ರೂ ಹಣ ಖರ್ಚು ಆಗುತ್ತದೆ ಅದನ್ನು ಯು.ಪಿ.ಐ. ಮೂಲಕ ಪಾವತಿಸುವಂತೆ ತಿಳಿಸುತ್ತಿದ್ದನು.

ಹಣ ಪಾವತಿಯಾದ ನಂತರ ಆರೋಪಿಯು ಯಾವುದೇ ರಿಪೇರಿ ಮಾಡದಂತೆ ಫೋನ್ ಕಾಲ್‍ಗಳನ್ನು ಬ್ಲಾಕ್ ಮಾಡಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ. ಕೆಲವೊಮ್ಮೆ ಸಾರ್ವಜನಿಕರು ಕರೆ ಸ್ವೀಕರಿಸಿದಾಗ ಹಣ ನೀಡದಿದ್ದಲ್ಲಿ ಅವರ ಮನೆಗಳಿಗೆ ಹೋಗಿ ಉಪಕರಣಗಳನ್ನು ಪರಿಕ್ಷೀಸುವಂತೆ ನಾಟಕವಾಡಿ ನಂತರ ಸಾರ್ವಜನಿಕರಿಗೆ ತಿಳಿಯದಂತೆ ಯಾವೂದೋ ಹೆಸರು ತಿಳಿಸಿ ಉಪಕರಣವು ಕೆಟ್ಟು ಹೋಗಿದೆ ಎಂದು ಹೇಳಿ ಹೊಸ ಉಪಕರಣ ತರಲು ಹಣ ಪಡೆದು ಪರಾರಿಯಾಗುತ್ತಿದ್ದನು.

ಈ ಬಗ್ಗೆ ಮೋಸ ಹೋದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಮಾಡಿ ಬಂಸುವಲ್ಲಿ ಯಶಸಿ ್ವಯಾಗಿದ್ದಾರೆ.

ಪ್ರಕರಣದ ಪತ್ತೆ ಕಾರ್ಯವನ್ನು ಉಪಪೊಲೀಸ್ ಆಯುಕ್ತ ಡಾ. ಅನೂಪ್ ಎ ಶೆಟ್ಟಿರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟ್‍ರ್ ಸಂತೋಷ್‍ರಾಮ್, ಪಿಎಸ್‍ಐಗಳಾದ ರಮಣಗೌಡ, ರಘು, ಎಎಸ್‍ಐ ರಮೇಶ್ ಹಾಗೂ ಸಿಬ್ಬಂದಿಗಳು ಕೈಗೊಂಡಿದ್ದರು.

ಸಾರ್ವಜನಿಕರು ಜಾಗೃತರಾಗಿ

ಸಾರ್ವಜನಿಕರು ತಮ್ಮ ಮನೆಗಳಲ್ಲಿ ಎಲೆಕ್ಟ್ರಿಕಲ್ ಉಪಕರಣಗಳು ರಿಪೇರಿಗೆ ಬಂದರೆ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಕಂಪೆನಿಗಳ ವೆಬ್‍ಸೈಟ್‍ನ್ನೇ ಹುಡುಕಿ ಕರೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಟೋಲ್‍ಪ್ರೀ ನಂಬರ್‍ಗೆ ಕರೆ ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ತಮ್ಮ ಮನೆಗಳಿಗೆ ಉಪಕರಣಗಳ ರಿಪೇರಿಗೆಂದು ಬರುವವರ ಬಗ್ಗೆ ಮಾಹಿತಿ ಜೊತೆಗೆ ಮೊಬೈಲ್ ನಂಬರ್ ಸಹ ಪಡೆದುಕೊಳ್ಳಬೇಕು.

ನಿಮ್ಮ ಮನೆಯಲ್ಲಿರುವ ಕಂಪೆನಿಗಳ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾದಲ್ಲಿ ಅದೇ ಕಂಪೆನಿಯನ್ನು ಸಂಪರ್ಕಿಸಬೇಕು. ರಿಪೇರಿಗೆಂದು ಮನೆಗೆ ಬಂದವರ ಬಗ್ಗೆ ಅನುಮಾನ ಬಂದಲ್ಲಿ ಹತ್ತಿರದ ಪೊಲೀಸ್
ಠಾಣೆಗೆ ದೂರು ನೀಡಿ ಎಫ್‍ಐಆರ್ ದಾಖಲಿಸಿದರೆ ಪೆÇಲೀಸರು ಕ್ರಮ ಕೈಗೊಂಡು ಆರೋಪಿಯನ್ನು ಬಂಸಲು ನೆರವಾಗುತ್ತದೆ.

ಒಟ್ಟಾರೆ ಟೋಲ್ ಫ್ರೀ ನಂಬರ್ ಇದೆ ಎಂದು ಯೋಚಿಸದೆ ಕರೆ ಮಾಡಿ ಮೋಸ ಹೋಗದಂತೆ ಜಾಗೃತರಾಗಬೇಕೆಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

electronic, equipment, repair, Fraud, man, arrested,

Articles You Might Like

Share This Article