ಒಂಟಿ ಸಲಗದ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ

ಹಾಸನ .ಜೂ.2.ಮಲೆನಾಡಿನಲ್ಲಿ ಕಾಡಾನೆಗಳ ಉಪಟಳಮುಂದುವರೆದಿದ್ದು ಕಾಫಿ ತೋಟದ ಮಾಲೀಕ ಒಂಟಿಸಲಗದ ದಾಳಿಗೆ ಬಲಿಯಾಗಿರು ಘಟನೆ ಸಕಲೇಶಪುರ ತಾಲೂಕಿನ ಕಿರು ಹುಣಸೆ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ರಾಜಣ್ಣ(59) ಒಂಟಿಸಲಗದ ದಾಳಿಗೆ ಬಲಿಯಾದ ಕಾಫಿ ತೊಟದ ಮಾಲೀಕ.

ಇಂದು ಮುಜಾನೆ ತೋಟದ ಕಡೆ ತೆರಳಿದ್ದಾಗ ಏಕಾ ಏಕಿ ರಾಜಣ್ಣ ಅವರ ಮೇಲೆ ದಾಳಿ ಮಾಡಿದ ಒಂಟಿ ಸಲಗ ಮನಬಂದಂತೆ ತುಳಿದು ಸಾಯಿಸಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೇಲಿಂದ ಮೇಲೆ ಜನ ಜಾನುವಾರುಗಳ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿವೆ.ಇದರಿಂದ ಹಲವು ಸಾವು ನೊವುಗಳು ಸಂಭವಿಸುತ್ತಿವೆ.

ದಾಳಿ ಘಟನೆಗಳು ಮರುಕಳಿಸುತ್ತುದ್ದರೂ ಅರಣ್ಯ ಇಲಾಖೆಯವರು ಮಾತ್ರ ಶಾಶ್ವತ ಪರಿಹಾರ ಕಂಡು ಕೊಂಡಿಲ್ಲ ಇದರಿಂದ ಈ ಭಾಗದ ರೈತರು ಭಾರಿ ಆತಂಕಕ್ಕೆ ಇಡಾಗಿದ್ದಾರೆ.ಕೈ ಗೆ ಬಂದ ಬೆಳೆಗಳನ್ನು ತಿಂದು ತುಳಿದು ನಾಶ ಮಾಡುತ್ತಿವೆ ಇದರಿಂದ ರೈತರು ಕಂಗಾಲಾಗಿದ್ದಾರೆ.
ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ನಿಡದ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.