ಹುಡುಕಿಕೊಂಡು ಬಂದು ಮನೆ ಮೇಲೆ ದಾಳಿ ಮಾಡಿದ ಆನೆ

Social Share

ಸಕಲೇಶಪುರ, ನ.24- ಆರು ತಿಂಗಳ ನಂತರ ಹುಡುಕಿಕೊಂಡು ಬಂದು ಮನೆಯ ಕಿಟಕಿ ಗಾಜುಗಳನ್ನು ಕಾಡಾನೆ ಧ್ವಂಸ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದಲ್ಲಿ ನಡೆದಿದೆ.

ಕಳೆದ ಆರು ತಿಂಗಳ ಹಿಂದೆ ಗಿರೀಶ್ ಎಂಬುವವರ ಮನೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿತ್ತು. ಈ ರೀತಿ ಮನೆ ನುಗ್ಗುವ ಕಾಡಾನೆಯನ್ನು ಅರಣ್ಯ ಇಲಾಖೆ ಗುರುತಿಸಿ ಸೆರೆ ಹಿಡಿದು ಮಲೆಮಾದೇಶ್ವರ ಬೆಟ್ಟದ ಕಾಡಿಗೆ ಬಿಟ್ಟಿದ್ದರು.

ಆದರೂ ಕಳೆದ ಒಂದು ತಿಂಗಳ ಹಿಂದೆ ಕಾಡಿನಿಂದ ಮತ್ತೆ ಸಕಲೇಶಪುರಕ್ಕೆ ಬಂದಿದ್ದ ಕಾಡಾನೆಯು ಕಳೆದ ರಾತ್ರಿ ಆರು ತಿಂಗಳ ಹಿಂದೆ ದಾಳಿ ನಡೆಸಿದ ಮನೆಯ ಮೇಲೆ ಪುನಃ ದಾಳಿ ಮಾಡಿ ಮನೆಯ ಎಲ್ಲ ಕಿಟಕಿಗಳ ಗಾಜುಗಳನ್ನು ಪುಡಿ ಮಾಡಿದೆ.

ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದ ಕುಕ್ಕರ್ ಕ್ರಿಮಿ ಶಾರೀಕ್

elephant, attack, house, Sakleshpur,

Articles You Might Like

Share This Article