ಮಹಿಳೆಯನ್ನು ಕ್ರೂರವಾಗಿ ಕೊಂದುಹಾಕಿದ ಕಾಡಾನೆ

Social Share

ಚಿಕ್ಕಮಗಳೂರು,ನ.21- ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆಯೊಂದು ಮಹಿಳೆಯನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಬಡಿದು ಸಾಯಿಸಿರು ಘಟನೆ ಹುಲ್ಲೇ ಮನೆ ಕುಂದೂರಿನಲ್ಲಿ ನಡೆದಿದೆ.
ಗ್ರಾಮದ ಶೋಭಾ (45) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೇವಿ.

ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಕೆ ಹಸುವಿನ ಹಾಲು ಕರೆದು ಅದನ್ನು ಗ್ರಾಮದ ಕೆಲ ಮನೆಗಳಿಗೆ ವಿತರಿಸಿ ತನ್ನ ಪತಿ ಸತೀಶ್ ಗೌಡ ಅವರೊಂದಿಗೆ ಅಡಿಕೆ ತೋಟದಲ್ಲಿ ಹುಲ್ಲು ಕುಯ್ಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಾಡಾನೆ ಪ್ರತ್ಯಕ್ಷವಾಗಿದ್ದು ಏಕಾಏಕಿ ದಾಂಧಲೆ ಶುರು ಮಾಡಿಕೊಂಡಿದೆ.

ಜೊತೆಯಲ್ಲಿದ್ದ ಗ್ರಾಮದ ವಿಜಯ ಮತ್ತು ಇದ್ದು ಸತೀಶ್ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಶೋಭಾ ಅವರು ತೋಟದಿಂದ ರಸ್ತೆಗೆ ದಾಟುವ ಸಂದರ್ಭದಲ್ಲಿ ಆನೆ ಸೊಂಡಲಿನಿಂದ ಎತ್ತಿ ಬಿಸಾಡಿ ತುಳಿದು ಸಾಯಿಸಿ ತಕ್ಷಣ ಅಲ್ಲಿಂದ ಆನೆ ಕಾಫಿ ತೋಟದ ಒಳಗಡೆ ತೆರಳಿ ಮರೆಯಾಗಿದೆ.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಗಂಡನ ಕಣ್ಣು ಮುಂದೆಯೇ ಆನೆಯೊಂದು ಈ ರೀತಿ ಮಾಡಿರುವುದು ಏನು ಮಾಡದ ಪರಿಸ್ಥಿತಿಯಲ್ಲಿ ಸತೀಶ್ ಗೌಡ ಅಸಾಯಕರಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

ಕಾಡಾನೆ ದಾಳಿಯಿಂದ ಈಗಾಗಲೇ ಹಲವು ಜನರು ಸಾವು ಸಂಭವಿಸಿದೆ ಕೆಂಜಿಗೆ ಗ್ರಾಮದ ಆನಂದ ದೇವಾಡಿಗರನ್ನು ಹತ್ಯೆ ಮಾಡಿದ ಆನೆಯೇ ಇಂದು ಶೋಭಾ ಅವರನ್ನು ಹತ್ಯೆ ಮಾಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದರು.

5 ವರ್ಷಗಳ ನಂತರ ಚೇತೇಶ್ವರ್ ಪೂಜಾರಗೆ ಅರ್ಜುನ ಪ್ರಶಸ್ತಿ ಪ್ರದಾನ

ಮೂಡಿಗೆರೆ ತಾಲೂಕಿನಲ್ಲಿಯೇ ಮೂವತ್ತಕ್ಕೂ ಹೆಚ್ಚು ಅಕ ಕಾಡಾನೆ ತಿರುಗುತ್ತಿದ್ದರು ಯಾವ ಆನೆಯಿಂದ ಯಾವ ರೀತಿಯಲ್ಲಿ ಅಪಾಯ ಬರುವುದು ಗೊತ್ತಿಲ್ಲ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದೇವೆ ಒಂದೆರಡು ಕಾಡಾನೆ ಹೇಳಿದರೆ ಸಾಲದು ಎಲ್ಲಾ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಿ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದರು.

elephant, attack, Woman, Chikkamagaluru,

Articles You Might Like

Share This Article