ಆನೆ ಕಾರಿಡಾರ್ ನಿರ್ಮಿಸಲು 600 ಕೋಟಿ ಒದಗಿಸುವಂತೆ ಆಗ್ರಹ

Social Share

ಬೆಂಗಳೂರು,ಮಾ.4-ಆನೆ ಕಾರಿಡಾರ್ ನಿರ್ಮಿಸಲು ಕನಿಷ್ಠ 600 ಕೋಟಿ ರೂ.ಗಳನ್ನು ಒದಗಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಕಾಡಾನೆಗಳ ಉಪಟಳ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕೇವಲ 100 ಕೋಟಿ ರೂ. ಬಜೆಟ್‍ನಲ್ಲಿ ಒದಗಿಸಿರುವುದು ಸಾಲದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಅತ್ಯಲ್ಪ ಹಣದಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಸಕಲೇಶಪುರ ಮತ್ತು ಹಾಲೂರು ತಾಲ್ಲೂಕುಗಳಲ್ಲಿ 47 ಕಿ.ಮೀ ಉದ್ದದ ಬ್ಯಾರಿಕೇಡ್ ನಿರ್ಮಿಸಬೇಕಾಗಿದೆ. ಇತರೆ ಕಾರ್ಯಕ್ರಮ ಮತ್ತು ಆನೆ ಕಾರಿಡಾರ್ ನಿರ್ಮಿಸಲು ಅನುದಾನವನ್ನು ಹೆಚ್ಚಿಸಬೇಕು.
ಪ್ರವಾಸೋದ್ಯಮ ಅಭಿವೃದ್ದಿ ವಿಚಾರದಲ್ಲಿ ಪಶ್ಚಿಮಘಟ್ಟದ ಸಕಲೇಶಪುರವನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಬಳಕೆಯಾಗದೆ ಉಳಿಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Articles You Might Like

Share This Article