ಆನೆ ದಂತದಿಂದ ತಯಾರಿಸಿದ ಪುರಾತನ ಕಾಲದ ವಸ್ತುಗಳು ಜಪ್ತಿ

Social Share

ಬೆಂಗಳೂರು, ನ.18- ಬೆಲೆ ಕಟ್ಟಲಾಗದಂತಹ ಆನೆ ದಂತದಿಂದ ಮಾಡಿರುವ ಪುರಾತನ ಕಾಲದ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿ 7 ಕೆಜಿ 500 ಗ್ರಾಂ ತೂಕದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಿಯಾಣ ಮೂಲದ ಹಿಮ್ಮತ್ ಸಿಂಗ್, ಪಂಜಾಬ್‍ನ ಪ್ರವೀಣ್ ಸಾಂಬಿಯಾಲ್, ಮೈಸೂರಿನ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್, ಬೆಂಗಳೂರಿನ ಮೊಹಮ್ಮದ್ ಇಸ್ರಾರ್ ಅಲಿಯಾಸ್ ಬಾಬು ಮತ್ತು ಬೆಂಗಳೂರಿನ ಅಮ್ಜದ್ ಪಾಷ ಬಂಧಿತರು.

ನ.14ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆ, ಬನ್ನಪ್ಪ ಪಾರ್ಕ್ ಬಳಿ ಬಿಳಿ ಬಣ್ಣದ ಮಾರುತಿ ಸುಜುಕಿ ಕಾರಿನಲ್ಲಿ ಆರು ಮಂದಿ ಬಂದಿದ್ದು, ಅವರು ಆನೆ ದಂತಗಳಿಂದ ಮಾಡಿರುವ ಪುರಾತನ ಕಾಲದ ವಸ್ತುಗಳನ್ನು ಮಾರಾಟ ಮಾಡಲು ಕಾಯುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಜಾಬ್ ಮತ್ತು ಹರಿಯಾಣದ ಇಬ್ಬರು ಆರೋಪಿಗಳು, ಮೈಸೂರಿನ ಇಬ್ಬರು ಹಾಗೂ ಬೆಂಗಳೂರಿನ ಇಬ್ಬರನ್ನು ಬಂಧಿಸಿದ್ದಾರೆ.

ಈ ಆರು ಮಂದಿ ಒಟ್ಟಾಗಿ ಸೇರಿಕೊಂಡು ಬೆಲೆ ಕಟ್ಟಲಾಗದಂತಹ ಪುರಾತನ ಕಾಲದ ಆನೆ ದಂತದಿಂದ ಮಾಡಿದ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಹೆಚ್ಚಿನ ಹಣ ಸಂಪಾದನೆ ಮಾಡಲು ಬಂದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳಿಂದ ಆನೆ ದಂತದಿಂದ ಮಾಡಲಾಗಿರುವ 533 ಗ್ರಾಂ ತೂಕದ ಚೌಕಾಕಾರದ ಬಾಕ್ಸ್ , 1.605 ಗ್ರಾಂ ತೂಕದ ಮತ್ತೊಂದು ಬಾಕ್ಸ್, ಆನೆ ದಂತದ ಹಿಡಿಕೆ ಇರುವ 79 ಗ್ರಾಂನ ಚಾಕು, ಆನೆ ದಂತದಿಂದ ಮಾಡಿದ 153 ಗ್ರಾಂ, 97 ಗ್ರಾಂ, 102 ಗ್ರಾಂ ಬಾಗಿಲ ಹಿಡಿಕೆಗಳು, ಆನೆ ದಂತದ 74 ಗ್ರಾಂ ಹಾಗೂ 96 ಗ್ರಾಂ ಕೈ ಕಡಾಗಳು, 417 ಗ್ರಾಂ, 228 ಗ್ರಾಂ, 58 ಗ್ರಾಂ ಹಾಗೂ 53 ಗ್ರಾಂ ತೂಕದ ಆನೆಯ ಮೂರ್ತಿಗಳು.

ನ.1ರಿಂದಲೇ ಪೂರ್ವಾನ್ವಯವಾಗುವಂತೆ ಮೀಸಲಾತಿ ಹೆಚ್ಚಳ ಜಾರಿ

748 ಗ್ರಾಂ, 624 ಗ್ರಾಂ, 671 ಗ್ರಾಂ ಮತ್ತು 621 ಗ್ರಾಂ ತೂಕದ ವಾಕಿಂಗ್ ಸ್ಟಿಕ್‍ಗಳು ಮತ್ತು ಆನೆ ದಂತದಿಂದ ಮಾಡಿರುವ ಮೊಟ್ಟೆ ಆಕಾರದ 20 ಏರಾಟಿಕ್ ಆರ್ಟ್ ವಕ್ರ್ಸ್ 603 ಗ್ರಾಂ, ಮರದ ವಾಲ್ ಹ್ಯಾಂಗಿಗ್ ಅದರಲ್ಲಿ ಆನೆ ದಂತದಿಂದ ಮಾಡಿರುವ ನಾಲ್ಕು ಆನೆಗಳ ಚಿತ್ರ 727 ಗ್ರಾಂ ಹಾಗೂ ಜಿಂಕೆ ಕೊಂಬಿನ ಹಿಡಿಕೆ ಇರುವ ಚಾಕು, ಒಂದು ಶಂಕುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳಕ್ಕೆ ವಹಿಸಿದ್ದು, ತನಿಖೆ ಮುಂದುವರೆದಿದೆ.

ರಾಷ್ಟ್ರೀಯ ನಾಯಕರನ್ನು ಕರೆತಂದು ಸಾಲು ಸಾಲು ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ

ಈ ಯಶಸ್ವಿ ಕಾರ್ಯಾಚರಣೆಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಆಯುಕ್ತರಾದ ರೀನಾಸುವರ್ಣ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಹಜರೇಶ್ ಕಿಲ್ಲೇದಾರ್ ಮತ್ತು ದುರ್ಗ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.

elephant, ivory, Antiquities, Bengaluru,CCB, police,

Articles You Might Like

Share This Article