ಮೈಸೂರು,ಸೆ.14-ವಿಶ್ವ ವಿಖ್ಯಾತ ದಸರಾದಲ್ಲಿ ಪಾಲ್ಗೊಳ್ಳಲು ಸಾಂಸ್ಕøತಿಕ ನಗರಿಗೆ ಆಗಮಿಸಿದ 22 ವರ್ಷದ ಆನೆ ಲಕ್ಷ್ಮಿ ಕಳೆದ ರಾತ್ರಿ ಆನೆ ಶಿಬಿರದಲ್ಲಿ ಗಂಡು ಮರಿಗೆ ಜನ್ಮ ನೀಡಿದ್ದು ಮಾವುತರು, ಕಾವಾಡಿಗರಲ್ಲಿ ಸಂತಸ ತಂದಿದೆ.
ದಸರಾದಲ್ಲಿ ಪಾಲ್ಗೊಳ್ಳಲು ಮೊದಲ ಹಂತದ ಗಜ ಪ್ರಯಾಣದಲ್ಲಿ ಲಕ್ಷ್ಮಿ ನಗರಕ್ಕೆ ಆಗಮಿಸಿತ್ತು. ಕಳೆದ ಒಂದು ತಿಂಗಳಿನಿಂದ ಸಾಮಾನ್ಯ ಆನೆಗಳಂತೆ ತಾಲೀಮಿನಲ್ಲಿ ಭಾಗವಹಿಸುತಿತ್ತು. ಆದರೆ ನಿನ್ನೆ ಮಧ್ಯಾಹ್ನ ತನ್ನ ವರ್ತನೆಯನ್ನು ಬದಲಾಯಿಸಿದ್ದನ್ನು ಗಮನಿಸಿದ ಮಾವುತರು ಕೂಡಲೇ ಪಶು ವೈದ್ಯರು ಮತ್ತು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಆನೆ ಗರ್ಭಿಣಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022)
ಕೂಡಲೇ ಆನೆಯನ್ನು ಅರಮನೆ ಸಮೀಪಕ್ಕೆ ಸ್ಥಳಾಂತರಿಸಲಾಯಿತು. ಈ ವೇಳೆ ವೈದ್ಯರು ಮತ್ತು ಮಾವುತರ ಸಮ್ಮುಖದಲ್ಲೇ ಗಂಡುಮರಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ವೈದ್ಯರು ಹಾಗೂ ಅರಣ್ಯ ಅಕಾರಿಗಳು ಪರಿಶೀಲಿಸಿದ ನಂತರ ದಸರಾ ತಾಲೀಮಿಗೆ ಕರೆದುಕೊಂಡು ಬರಲಾಗುತ್ತದೆ. ಗರ್ಭಿಣಿ ಆನೆಯನ್ನು ಕರೆತರುವುದಿಲ್ಲ.
ಸಾಮಾನ್ಯ ಆನೆಯಂತಿದ್ದ ಲಕ್ಷ್ಮಿ ಇದ್ದಕ್ಕಿದ್ದಂತೆ ಮರಿಗೆ ಜನ್ಮ ನೀಡಿರುವುದು ಕಾವಾಡಿಗರು ಹಾಗೂ ವೈದ್ಯರಲ್ಲಿ ಅಚ್ಚರಿ ತಂದಿದೆ.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ
ರಾಜವಂಶಸ್ಥರಾದ ಶ್ರೀಕಂಠದತ್ತ, ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿ ದೇವಿ ಅವರು ಲಕ್ಷ್ಮಿ ಆನೆಯನ್ನು ಸಾಕಿ ಬೆಳೆಸಿದ್ದರು. ಇದೀಗ ಅರಮನೆ ಆವರಣದಲ್ಲೇ 2ನೇ ಮರಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ.