2 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಲಕ್ಷ್ಮಿಆನೆ ಕೊನೆಗೂ ಪತ್ತೆ

Spread the love

ನವದೆಹಲಿ,ಸೆ.18(ಪಿಟಿಐ)-ಕಳೆದೆರಡು ತಿಂಗಳ ಹಿಂದೆ ನಾಪತ್ತೆಯಾಗಿ ಆತಂಕ ಮೂಡಿಸಿದ್ದ 47 ವರ್ಷದ ಲಕ್ಷ್ಮಿ ಎಂಬ ಆನೆ ಕೊನೆಗೂ ಪತ್ತೆಯಾಗಿದೆ. ಈ ಸಂಬಂಧ ಮಾವುತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದೆ.

ದೆಹಲಿಯ ಯಮುನಾ ಪುಷ್ಟ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ 3ರ ಸಮಯದಲ್ಲಿ ಲಕ್ಷ್ಮಿ ಮತ್ತು ಆಕೆಯ ಮಾವುತ ಸದ್ದಾಂ ಪತ್ತೆಯಾದರು. ಆನೆಯನ್ನು ವಶಕ್ಕೆ ತೆಗೆದುಕೊಂಡ ಅರಣ್ಯ ಸಿಬ್ಬಂದಿ ಮಾವುತನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಶಕರ್‍ಪುರ್ ಪ್ರದೇಶದ ಯೂಸೂಫ್ ಅಲಿ ಎಂಬುವರಿಗೆ ಈ ಆನೆ ಸೇರಿತ್ತು. ಆದರೆ ಇದನ್ನು ಹರಿಯಾಣದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಅಲಿ ಮತ್ತು ಅರಣ್ಯ ಇಲಾಖೆ ನಡುವೆ ಭಿನ್ನಾಭಿಪ್ರಾಯ ತಲೆದೋರಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.

ಜು.6ರಂದು ಅರಣ್ಯ ಸಿಬ್ಬಂದಿ ಆನೆಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಯುಸೂಫ್ ಅಲಿ ಮನೆಗೆ ಬಂದ ಅರಣ್ಯ ಸಿಬ್ಬಂದಿ ಮೇಲೆ ಕುಟುಂಬ ವರ್ಗದವರು ಹಲ್ಲೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾವುತ ಲಕ್ಷ್ಮಿ ಜೊತೆ ಪರಾರಿಯಾದ. ಆನೆ ಪರಾರಿಯಾಗಿರುವುದರಿಂದ ಗಜದ ಹಾವಳಿಯಿಂದ ತೊಂದರೆಯಾಗುವ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಲಕ್ಷ್ಮಿ ಪತ್ತೆಯಾದರೆ ತಿಳಿಸುವಂತೆ ಕೋರಿತ್ತು.

Facebook Comments