ಹಲವು ವರ್ಷಗಳ ನಂತರ ಎದ್ದು ನಿಂತ 40 ಟನ್ ತೂಕದ ಆನೆ..!

Social Share

ಬೇಲೂರು,ಜ.21- ತಾಲೂಕಿನ ಬೆಣ್ಣಿನಮನೆ ಗ್ರಾಮದ ಜಮೀನಿನಲ್ಲಿ ಹಲವು ವರ್ಷಗಳಿಂದ ಬಿದ್ದಿದ್ದ ಬೃಹತ್ ಗಾತ್ರದ ಕಲ್ಲಿನ ಆನೆಯನ್ನು 2 ಕ್ರೇನ್ ಹಾಗೂ 1 ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ. ಹೊಯ್ಸಳರ ಕಾಲದಲ್ಲಿ ಬೇಲೂರಿನ ಶ್ರೀ ಚನ್ನಕೆಶವಸ್ವಾಮಿ ದೇಗುಲ ನಿರ್ಮಾಣದ ಸಂದರ್ಭದ ಬೆಣ್ಣಿನಮನೆ ಗ್ರಾಮದಲ್ಲಿದ್ದ ಬೃಹತ್ ಗಾತ್ರದ ಬಂಡೆಕಲ್ಲಿನಿಂದ ಸಾಕಷ್ಟು ಕಲ್ಲಿನ ವಿಗ್ರಹಗಳನ್ನು ಕೆತ್ತಲಾಗಿದೆ ಎಂಬ ಉಹಾ ಪೋಹಗಳು ಹಿಂದಿನಿಂದಲೂ ಗ್ರಾಮಸ್ಥರನ್ನು ಕಾಡುತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬೆಣ್ಣಿನಮನೆ ಗ್ರಾಮದಲ್ಲಿ 35 ರಿಂದ 40 ಟನ್ ತೂಕದಕಲ್ಲಿನ ಕಲ್ಲಿನ ಆನೆ ಸಿಕ್ಕಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.
ತಾಲೂಕಿನ ಬೆಣ್ಣಿನಮನೆ ಗ್ರಾಮದಲ್ಲಿ ಈ ಹಿಂದೆ ಆನೆಕಲ್ ನಿಂಗೇಗೌಡ ಎಂಬುವವರು ಜಮೀನನ್ನು ಊಳುಮೆ ಮಾಡುವಾಗ ಕಲ್ಲಿನ ಆನೆ ಕಂಡು ಬಂದಿತ್ತು. ಆದರೆ, ಈ ಭಾಗದಲ್ಲಿ ಹೆಚ್ಚು ಕಾಡು ಇದ್ದುದ್ದರಿಂದ ಕಲ್ಲಿನ ಆನೆಯ ವಿಗ್ರಹದ ಬಗ್ಗೆ ಯಾರೂ ಸಹ ಗಮನ ಹರಿಸಿರಲಿಲ್ಲ.
ಆನೆಕಲ್ ನಿಂಗೇಗೌಡರು ತಮ್ಮ ಜಮೀನನ್ನುಅಣ್ಣೇಗೌಡ ಎಂಬುವವರಿಗೆ ಕೆಲ ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದರು. ಅಂದು ಕಾಡಿನಂತಿದ್ದ ಜಮೀನನ್ನುಅಣ್ಣೇಗೌಡಡ ಹಾಗೂ ಅವರ ಮಕ್ಕಳು ಕಾಫಿ ತೋಟವನ್ನಾಗಿ ಮಾರ್ಪಡಿಸಿ ಬೆಳೆ ಬೆಳೆಯುತಿದ್ದರು.
ಅಲ್ಲದೆ, ಹಬ್ಬ ಹರಿದಿನಗಳಲ್ಲಿ ಹಾಗೂ ಜಮೀನಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಕಲ್ಲಿನ ಆನೆಗೆ ಪೂಜೆ ಸಲ್ಲಿಸಿ ಮುಂದಿನ ಕೆಲಸ ಮಾಡುತಿದ್ದರು. ಆದರೆ, ಕಲ್ಲಿನ ಆನೆ ಎಡ ಮಗ್ಗುಲಲ್ಲಿ ಮಲಗಿದೆ. ಆದ್ದರಿಂದ ಈ ಜಮೀನಿನ ಮಾಲೀಕರಿಗೆ ಏಳಿಗೆ ಹಾಗುವುದಿಲ್ಲ ಎಂಬ ಗ್ರಾಮಸ್ಥರ ಮಾತಿನಂತೆ ಪುರೋಹಿತರನ್ನು ಭೇಟಿಯಾಗಿ ಕಲ್ಲಿನ ಆನೆಯನ್ನುಎತ್ತಿ ನಿಲ್ಲಿಸಲು ಮುಂದಾಗಿದ್ದಾರೆ.
ಅದು ಮೇಲೇಳದ ಕಾರಣ ಎರಡು ಕ್ರೇನ್ ಹಾಗೂ ಒಂದು ಜೆಸಿಬಿ ಯಂತ್ರದ ಸಹಾಯದಿಂದ 12 ಅಡಿ ಅಗಲ, 6 ಅಡಿ ಎತ್ತರವಿರುವ ಅಂದಾಜು 35 ರಿಂದ 40 ಟನ್‍ನಷ್ಟು ತೂಕವಿರುವ ಆನೆಯನ್ನು ಮೇಲಕ್ಕೆತ್ತಿ ನಿಲ್ಲಿಸಲಾಗಿದೆ.
ಜಮೀನಿನ ಮಾಲೀಕ ದಿನೇಶ್ ಈ ಬಗ್ಗೆ ಮಾತನಾಡಿದ್ದು, ಈ ಜಮೀನಿನಲ್ಲಿ ಎಡ ಭಾಗದಲ್ಲಿ ಕಲ್ಲಿನ ಆನೆ ಮಲಗಿದೆ ಎಂದು ಯಾರೂ ಜಮೀನು ಕೊಳ್ಳಲು ಮುಂದಾಗದ ಸಂದರ್ಭ, ನಮ್ಮ ತಂದೆ ಅಣ್ಣೇಗೌಡರು ಧೈರ್ಯದಿಂದ ಜಮೀನು ಕೊಂಡುಕೊಂಡರು. ಅಂದಿನಿಂದ ನಾವು ಜಮೀನು ಉಳುಮೆ ಮಾಡಿಕೊಂಡುಹಬ್ಬ ಹರಿ ದಿನಗಳಲ್ಲಿ ಹಾಗೂ ಜಮೀನಿನಲ್ಲಿ ಬೆಳೆ ಬೆಳೆಯುವ ಸಂದರ್ಭದಲ್ಲಿ ಕಲ್ಲಿನ ಆನೆಗೆ ಪೂಜೆ ಸಲ್ಲಿಸಿ ಮುಂದಿನ ಕೆಲಸ ಮಾಡುತ್ತಬರುತಿದ್ದೇವೆ. ಆದರೆ ಸಣ್ಣಪುಟ್ಟ ಸಮಸ್ಯೆ ಬಂದರೂ ಗ್ರಾಮಸ್ಥರು ಮಾತ್ರಕಲ್ಲಿನ ಆನೆಯಿಂದ ಹೀಗಾಗುತ್ತಿದೆ.ಅದನ್ನುಎತ್ತಿ ನಿಲ್ಲಿಸಿ ಎನ್ನುತ್ತಲೇ ಇದ್ದರು. ಇಲ್ಲಿರುವ ಆನೆ ಬಗ್ಗೆ ಧರ್ಮಸ್ಥಳ ಹೆಗ್ಗಡೆಯವರಿಗೂ ತಿಳಿಸಿದ್ದೆವು ಎಂದರು.
ಅಲ್ಲಿಂದ ವ್ಯವಸ್ಥಾಪಕರು ಬಂದುತೋಟದ ಮಧ್ಯದಲ್ಲಿ ಇರುವುರಿಂದ ಇದನ್ನುತೆಗೆದುಕೊಂಡು ಹೋಗಲು ರಸ್ತೆ ಇಲ್ಲ ಎಂದು ವಾಪಸ್ ಹೋದರು. ನಂತರ ನಾವು ಎರಡು ಬಾರಿ ಎತ್ತಿ ನಿಲ್ಲಿಸಲು ಪ್ರಯತ್ನಿಸಿದ್ದೆವು. ಅದು ಸಾಧ್ಯವಾಗಿರಲಿಲ್ಲ. ಆದರೆ ನಾವು ಈಗ ತೋಟ ತೆರವು ಗೊಳಿಸಿಜಮೀನು ಸಮತಟ್ಟು ಮಾಡಿಸುತ್ತಿರುವುದರಿಂದ ಎರಡು ಕ್ರೇನ್ ಹಾಗೂ ಒಂದು ಜೆಸಿಬಿ ಯಂತ್ರದ ಮೂಲಕ ಕಲ್ಲಿನ ಆನೆಯನ್ನು ಎತ್ತಿ ನಿಲ್ಲಿಸಿದ್ದೇವೆ ಎಂದರು.

Articles You Might Like

Share This Article