ಬೆಂಗಳೂರು, ಜೂ.1- ನೀಲಗಿರಿ ತೋಪಿನಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ದಂತಚೋರರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 25 ಕೆಜಿ 500 ಗ್ರಾಂ ತೂಕದ ಆನೆದಂತ ವಶಪಡಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕೋಡಿಹಳ್ಳಿ ಹೋಬಳಿ ಹೇರಿಂದ್ಯಾಪನಹಳ್ಳಿ ಗ್ರಾಮದ ನಿವಾಸಿ ರವಿಕುಮಾರ್ (45) ಮತ್ತು ಹಾರೋಹಳ್ಳಿ ಹೋಬಳಿ ಕುಲುಮೆ ಭೀಮಸಂದ್ರದ ಸೋಮಶೇಖರ್ ಅಲಿಯಾಸ್ ಶಿವಣ್ಣ (58) ಬಂಧಿತ ದಂತಚೋರರು.
ಬನಶಂಕರಿ 3ನೆ ಹಂತ, ಸಪ್ತಗಿರಿ ಲೇಔಟ್, ಟಾಟಾ ಪ್ರಮೋಟ್ಸ್ ಅಪಾರ್ಟ್‍ಮೆಂಟ್ ಹತ್ತಿರದ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆದಂತ ಮಾರಾಟ ಮಾಡಲು ವ್ಯಕ್ತಿಯೊಬ್ಬ ಯತ್ನಿಸುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಬಿಬಿಎಂಪಿ ಗದ್ದುಗೆ ಮೇಲೆ ಡಿಕೆಶಿ ಕಣ್ಣು: ಮಾಜಿ ಮೇಯರ್‌ಗಳ ಜೊತೆ ಮಹತ್ವದ ಸಭೆ
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿ ರವಿಕುಮಾರ್‍ನನ್ನು ಬಂಧಿಸಿ, ದಂತ ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿ ನಂತರ ಮತೊಬ್ಬ ಆರೋಪಿ ಸೋಮಶೇಖರ್‍ನನ್ನು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ನಾಗರಾಜ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಸಂದೀಪ್‍ಕುಮಾರ್, ಪಿಎಸ್‍ಐ ಮನೋಜ್‍ಕುಮಾರ್, ನಾರಾಯಣ, ಎಎಸ್‍ಐ ದೊಳ್ಳಯ್ಯ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು. ಈ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಶ್ಲಾಘಿಸಿದ್ದಾರೆ.
#Elephanttusks, #seized, #Twoarrested,