ಗುಂಡಿನ ದಾಳಿ: ರಷ್ಯಾದ 11 ಸೈನಿಕರ ಸಾವು

Social Share

ಮಾಸ್ಕೋ.ಅ,16- ಉಕ್ರೇನ್ ಗಡಿಯಲ್ಲಿರುವ ನೈಋತ್ಯ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 11ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಕಳೆದ ರಾತ್ರಿ ರಷ್ಯಾದ ಮಿಲಿಟರಿ ಫೈರಿಂಗ್ ರೇಂಜ್‍ನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಸ್ವಯಂಸೇವಕ ಸೈನಿಕರು ಇತರ ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ ಇದರಲ್ಲಿ 11 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಪ್ರತಿದಾಳಿ ನಡೆಸಿ ದುಷ್ಕøತ್ಯ ನಡೆದ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಕರೆಯಲಾಗಿದೆ. ಉಕ್ರೇನ್‍ನಲ್ಲಿ ರಷ್ಯಾದ ಪಡೆಗಳನ್ನು ಹೆಚ್ಚಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ ನಂತರ ಆತುರದಲ್ಲಿ ಯೋಧರನ್ನು ಸಜ್ಜುಗೊಳಿಸುವಿಕೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ.

3,00,000 ನೇಮಕ ಮಾಡುವ ಪ್ರಯತ್ನದ ಭಾಗವಾಗಿ ಈಗಾಗಲೇ 2,20,000 ಕ್ಕೂ ಹೆಚ್ಚು ಜನರ ಪಡೆ ಸಜ್ಜಾಗಿದೆ ಎಂದು ಪುಟಿನ್ ಶುಕ್ರವಾರ ಹೇಳಿದರು. ಇತ್ತೀಚೆಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಜನರು ಮಾತ್ರ ಕರೆಗೆ ಒಳಪಡುತ್ತಾರೆ ಎಂದು ರಷ್ಯಾದ ನಾಯಕ ಘೋಷಿಸಿದರೂ, ಕೆಲವರನ್ನು ಬಲವಂತವಾಗಿ ಸೇವೆಗೆ ಕೆರುಕೊಂಡು ಬಂದಿದ್ದರು ಅದರಲ್ಲಿ ಕೆಲವರು ್ತ ವೈದ್ಯಕೀಯ ಕಾರಣಗಳಿಂದ ಅನರ್ಹರಾಗಿದ್ದಾರೆ.

ಸಜ್ಜುಗೊಳಿಸುವಿಕೆಯು ಸಾಮಾನ್ಯವಾಗಿ ಕಳಪೆಯಾಗಿ ಸಂಘಟಿತವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ಭರವಸೆ ನೀಡಿದ್ದಾರೆ.

Articles You Might Like

Share This Article