ಅಮಾನತುಗೊಂಡ ಟ್ವಿಟರ್ ಖಾತೆಗಳು ಮರು ಸ್ಥಾಪನೆಯಾಗಲಿವೆ

Social Share

ನವದೆಹಲಿ,ನ.25- ಕಾನೂನು ಉಲ್ಲಂಘನೆ ಆರೋಪದ ಮೇಲೆ ಸಾಮಾಜಿಕ ಜಾಲತಾಣ ಟ್ವಿಟರ್‍ನಿಂದ ಅಮಾನತುಗೊಂಡವರಿಗೆ ಸಾಮಾನ್ಯ ಕ್ಷಮಾದಾನ ನೀಡುವ ಮೂಲಕ ಅವರ ಖಾತೆಯನ್ನು ಮತ್ತೆ ಪ್ರತಿಷ್ಠಾಪಿಸಲಾಗುವುದು ಎಂದು ಸಂಸ್ಥೆ ಮುಖ್ಯಸ್ಥ ಎಲೋನ್ ಮಸ್ಕ್ ತಿಳಿಸಿದ್ದಾರೆ.

ಟ್ವಿಟರ್‍ನಿಂದ ಅಮಾನತುಗೊಂಡವರನ್ನು ಮತ್ತೆ ಖಾತೆಗೆ ಸೇರಿಸಬೇಕೇ ಬೇಡವೇ? ಎಂಬ ಬಗ್ಗೆ ನಡೆಸಲಾದ ಆನ್‍ಲೈನ್ ಸಮೀಕ್ಷೆಯಲ್ಲಿ ಬಹುತೇಕ ಮಂದಿ ತಪ್ಪು ಮಾಡಿದವರಿಗೆ ಕ್ಷಮಾದಾನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಆನ್‍ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಿದ 3.16 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಲ್ಲಿ ಶೇ.72 ಮಂದಿ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಅಮಾನತುಗೊಂಡವರನ್ನು ಮರಳಿ ಕರೆತರುವ ಪರವಾಗಿ ಮತ ಚಲಾಯಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ಯಾಬಿಲೋನ್ ಬೀ, ಖ್ಯಾತ ಹಾಸ್ಯ ನಟ ಕ್ಯಾಥೀಗ್ರಿಫಿನ್ ಮತ್ತಿತರ ಅಮಾನತುಗೊಂಡ ಖಾತೆಗಳನ್ನು ಮರುಸ್ಥಾಪಿಸಲಾಗಿತ್ತು.

ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ

ಈ ಬೆಳವಣಿಗೆ ಬೆನ್ನಲ್ಲೆ ಕೆಲವೊಂದು ಬಾರಿ ಕಾನೂನು ಮೀರಿ ಪೋಸ್ಟ್ ಮಾಡಿ ಟ್ವಿಟರ್‍ನಿಂದ ಅಮಾನತುಗೊಂಡವರಿಗೆ ರಿಲೀಫ್ ನೀಡಬೇಕೆ ಬೇಡವೆ ಎಂಬ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಟ್ವಿಟರ್ ಮರು ಸ್ಥಾಪನೆಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜ್ಯೋತಿರಾತ್ಯ ಸಿಂಧಿಯಾ ಘರ್ ವಾಪ್ಸಿ ಸಾಧ್ಯತೆ

ಟ್ವಿಟರ್‍ನಿಂದ ಅಮಾನತುಗೊಂಡಿರುವ ಸಾವಿರಾರು ಮಂದಿಯ ಖಾತೆಗಳನ್ನು ಮುಂದಿನ ವಾರದಿಂದ ಮರು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Elon Musk, offers, suspended, Twitter, accounts, reinstated,

Articles You Might Like

Share This Article