ಜನರ ಆಕ್ರೋಶದಿಂದ ಹೊತ್ತಿಉರಿಯುತ್ತಿದೆ ಶ್ರೀಲಂಕಾ, ಎಮರ್ಜೆನ್ಸಿ ಘೋಷಣೆ

Social Share

ಕೊಲಂಬೊ,ಜು.13- ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶಬಿಟ್ಟು ಪರಾರಿಯಾದ ಬೆನ್ನಲ್ಲೇ ಜಾರಿಗೆ ಬರುವಂತೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ರಾಯ್‍ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿವೆ.

ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶಭ್ರಷ್ಟರಾಗುತ್ತಿದ್ದಂತೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಲಭೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ಇದರ ಬೆನ್ನಲ್ಲೆ ಜನಾಕ್ರೋಶ ಮಿತಿ ಮೀರಿದೆ. ಅಧ್ಯಕ್ಷ ಗೋಟಬಯ ರಾಜಪಕ್ಷೆ, ಪ್ರಧಾನಿ ವಿಕ್ರಮಸಿಂಘೆ ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇಬ್ಬರಿಗೂ ಮಧ್ಯಾಹ್ನ 1 ಗಂಟೆವರೆಗೂ ಗಡುವು ನೀಡಿರುವ ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಬಳಿ ಜಮಾಯಿಸಿದ್ದಾರೆ.

ಸಂಸತ್ ಭವನದಿಂದ ಕೇವಲ 200 ಮೀಟರ್ ಅಂತರದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದ್ದು, ಕಂಡ ಕಂಡಲ್ಲಿ ಬೆಂಕಿ ಹಚ್ಚುವುದು, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕಂಡು ಬಂದಿದೆ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಶ್ರೀಲಂಕಾದ ಪಶ್ಚಿಮ ವಲಯದಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದು, ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರಧಾನಿ ಕಚೇರಿ ಸುತ್ತಲೂ ರಕ್ಷಣಾ ಪಡೆಗಳು ವೈಮಾನಿಕ ಗಸ್ತಿನ ಮೂಲಕ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.

ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ವಿಫಲರಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಗೋ ಗೋ ಗೊಟಬಯ ಎಂದು ಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರತಿಭಟನಾನಿರತರು ಪ್ರಧಾನಿ ಕಚೇರಿಯತ್ತ ನುಗ್ಗುವ ಪ್ರಯತ್ನ ನಡೆಸಿದ್ದಾರೆ. ಅಶ್ರುವಾಯು, ಲಾಠಿ ಚಾರ್ಜ್ ನಡೆಸಿದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ ಮಾದರಿಯಲ್ಲೇ ಪ್ರಧಾನಿ ಕಚೇರಿ ಮತ್ತು ಅಕೃತ ನಿವಾಸಕ್ಕೂ ನುಗ್ಗಲು ಪ್ರಯತ್ನಿಸಿದ್ದಾರೆ.

ಅಶ್ರುವಾಯು ಸಿಡಿತದಿಂದ ಉಸಿರಾಟದ ಬಳಲಿಕೆ, ಕಣ್ಣುರಿಯಿಂದ ಪೀಡಿತರಾಗಿರುವ ಪ್ರತಿಭಟನಾಕಾರರು ಪರಸ್ಪರ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ. ಪ್ರತಿಭಟನಾಕಾರರ ನಡುವೆಯೇ ಉಳಿದುಕೊಂಡಿರುವ ರಕ್ಷಣಾ ಸಿಬ್ಬಂದಿಗಳು ಅಶ್ರುವಾಯು ಸಿಡಿತದಿಂದ ಹಾನಿಗೆ ಒಳಗಾಗಿದ್ದಾರೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈ ಮೀರುತ್ತಿದೆ. ಹಂಗಾಮಿ ಅಧ್ಯಕ್ಷರಾಗಿರುವ ವಿಕ್ರಮಸಿಂಘೆ ಬಲ ಪ್ರಯೋಗದ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಸೂಚಿಸಿದ್ದಾರೆ.

ಈ ನಡುವೆ ತಪ್ಪು ನಿರ್ಧಾರಗಳಿಂದ ಶ್ರೀಲಂಕಾದ ಆರ್ಥಿಕತೆಯನ್ನು ಹಳ್ಳ ಹಿಡಿಸಿ, ಈಗ ದೇಶ ಭ್ರಷ್ಟರಾಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಷೆ ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡ ಮಿಲಿಟರಿ ವಿಮಾನ ಇಂದು ಬೆಳಗ್ಗೆ ಮಾಲ್ಡೀವ್ಸ್‍ನ ವಾಯು ನೆಲೆಯಲ್ಲಿ ಇಳಿದಿದೆ.

ಶ್ರೀಲಂಕಾದ ಜನಾಕ್ರೋಶದಿಂದ ಇಕ್ಕಟ್ಟಿಗೆ ಸಿಲುಕಿರುವ ಗೋಟಬಯ ಮಾಲ್ಡೀವ್ಸ್‍ಗೆ ಪಲಾಯನ ಮಾಡುವ ಮುನ್ನಾ ಕೆಲ ನಿರಾಕರಣೆಗಳನ್ನು ಎದುರಿಸಿದರು. ಆದರೆ ಮಾಲ್ಡೀವ್ಸ್ ಸಂಸತ್ತಿನ ಸ್ಪೀಕರ್ ಜೊತೆ ಸಂಧಾನ ನಡೆಸಿದ ಬಳಿಕ ಕೆಲ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಮಾಲ್ಡೀವ್ಸ್ ಸರ್ಕಾರ ವಿಮಾನ ಇಳಿಯಲು ಅವಕಾಶ ಮಾಡಿಕೊಟ್ಟಿದೆ. ಗೋಟಬಯ ಮತ್ತು ಅವರ ಕುಟುಂಬ ದೇಶ ಬಿಟ್ಟು ಪರಾರಿಯಾಗಲು ಭಾರತ ನೆರವು ನೀಡಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಇದನ್ನು ಶ್ರೀಲಂಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಳ್ಳಿ ಹಾಕಿದೆ. ಭಾರತ ಸರ್ಕಾರ ಶ್ರೀಲಂಕದ ಜನರ ಜೊತೆ ನಿಲ್ಲಲಿದೆ ಎಂದು ತಿಳಿಸಿದೆ.

73 ವರ್ಷದ ಗೋಟಬಯ, ತಮ್ಮ ಪತ್ನಿ ಮತ್ತು ಇಬ್ಬರು ಭದ್ರತಾ ಅಕಾರಿಗಳೊಂದಿಗೆ ಶ್ರೀಲಂಕಾದ ಮಿಲಿಟರಿ ಜೆಟ್‍ನಲ್ಲಿ ಬುಧವಾರ ಮುಂಜÁನೆ ಮಾಲ್ಡೀವ್ಸ್‍ಗೆ ಪಲಾಯನ ಮಾಡಿದರು. ಕಾರ್ಯನಿರ್ವಾಹಕ ಅಧ್ಯಕ್ಷರಿಗೆ ಸಂವಿಧಾನದಡಿ ವಾಯುಪಡೆಯ ವಿಮಾನ ಮಾಲ್ಡೀವ್ಸ್‍ಗೆ ಪ್ರಯಾಣಿಸಿದೆ ಎಂದು ಶ್ರೀಲಂಕಾ ಸೇನೆ ಸಂಕ್ಷೀಪ್ತ ಹೇಳಿಕೆಯಲ್ಲಿ ತಿಳಿಸಿದೆ.

ರಾಜಪಕ್ಸೆ ಅವರು ಕೊಲಂಬೊದಿಂದ ಪಲಾಯನಗೈದ ನಂತರ ಮಾಲ್ಡೀವ್ಸ್‍ನಲ್ಲಿ ಇಳಿಯಲು ಅವಕಾಶ ಮಾಡಿಕೊಡಬೇಕೆ ಬೇಡವೇ ಎಂಬ ಜಿಜ್ಞೆಸೆಗಳು ಕಾಡಿದ್ದವು. ಮಾಲ್ಡೀವ್ಸ್ ಸಂಸತ್ (ಮಜ್ಲಿಸ್)ನ ಸ್ಪೀಕರ್ ನಶೀದ್ ಅವರು ಮಾತುಕತೆ ನಡೆಸಿ ಅನುಮತಿ ಪಡೆದ ಬಳಿಕ ರಾಜಧಾನಿ ಮಾಲೆಯಲ್ಲಿ ವಿಮಾನ ಇಳಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜಪಕ್ಸೆ ಇನ್ನೂ ಶ್ರೀಲಂಕಾದ ಅಧ್ಯಕ್ಷರಾಗಿದ್ದಾರೆ, ಅವರು ಈವರೆಗೂ ರಾಜೀನಾಮೆ ನೀಡಿಲ್ಲ ಅಥವಾ ಉತ್ತರಾಕಾರಿಗೆ ಅಕಾರವನ್ನು ಹಸ್ತಾಂತರಿಸಿಲ್ಲ. ಹಾಗಾಗಿ ತಾಂತ್ರಿಕ ಕಾರಣಗಳಿಂದ ಒಂದು ದೇಶದ ಅಧ್ಯಕ್ಷರಿಗೆ ಮಾಲ್ಡೀವ್ಸ್ ಪ್ರವೇಶಕ್ಕೆ ಅವಕಾಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ಸರ್ಕಾರದ ವಾದವಾಗಿದೆ.

ರಾಜಪಕ್ಸೆ ಜೊತೆ ಒಟ್ಟು ಹದಿಮೂರು ಮಂದಿ ಮಾಲ್ಡೀವ್ಸ್‍ಗೆ ಎನ್32 ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆರಂಭದಲ್ಲಿ ಗೋಟಬಯ ಅವರ ವಿಮಾನ ಮಾಲ್ಡೀವ್ಸ್‍ನಲ್ಲಿ ಇಳಿಯಲು ಅಲ್ಲಿಮ ಮಿಲಿಟರಿ ಅವಕಾಶ ನಿರಾಕರಿಸಿತ್ತು. ಸ್ಪೀಕರ್ ಮೊಹಮ್ಮದ್ ನಶೀದ್‍ಮಧ್ಯ ಪ್ರವೇಶದಿಂದ ಲ್ಯಾಂಡಿಂಗ್‍ಗೆ ಅನುಮತಿ ನೀಡಲಾಗಿದೆ ಎಂದು ವರದಿಗಳು ಹೇಳಿವೆ.

ಶ್ರೀಲಂಕದಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ತಮ್ಮ ಮನೆಗೆ ಮುತ್ತಿಗೆ ಹಾಕಿದ ಪರಿಣಾಮ, ಅಕೃತ ನಿವಾಸ ಬಿಟ್ಟು ಪಲಾಯನಗೈದಿದ್ದ ಅಧ್ಯಕ್ಷ ರಗೋಟಬಯ ರಾಜಪಕ್ಷೆ , ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ಘೋಷಿಸಿದ್ದರು. ಇಂದು ರಾತ್ರಿ 8 ಗಂಟೆ ವೇಳೆಗೆ ತಮ್ಮ ಗಮ್ಯ ಸ್ಥಾನ ತಲುಪಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ಪತ್ರವನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾದ ದಿ ಮಾರ್ನಿಂಗ್ ನ್ಯೂಸ್ ಪೆÇೀರ್ಟಲ್ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಗೋಟಬಯ ನಿರ್ಗಮನದ ಬಳಿಕ ಸರ್ವಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಕ್ರಿಯೆ ಚಾಲನೆ ದೊರೆತಿದೆ. ಶ್ರೀಲಂಕ ಹಂಗಾಮಿ ಸ್ಪೀಕರ್ ಆಗಿ ಮಹಿಂದ ಯಾಪಾ ಅಬೇವರ್ಧನ ನೇಮಕವಾಗಿದ್ದಾರೆ. ಜನರ ಪ್ರತಿಭಟನೆಗೆ ಮಣಿದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಅವರು ನೂತನ ಸರ್ಕಾರ ರಚನೆಯ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದರೆ ಅರಾಜಕತೆಯ ಪರಿಸ್ಥಿತಿಯಲ್ಲಿ ತಾವೇ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Articles You Might Like

Share This Article