ಫ್ರಾನ್ಸ್ ಅಧ್ಯಕ್ಷ ಚುನಾವಣೆಗೆ ಮ್ಯಾಕ್ರನ್ 2ನೇ ಅವಧಿಗೆ ಸ್ಪರ್ದೆ

Social Share

ಪ್ಯಾರಿಸï, ಮಾ.4- ಫ್ರಾನ್ಸ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಂದಿನ ಏಪ್ರಿಲ್‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಸ್ರ್ಪಧಿಸುವುದಾಗಿ ಘೋಷಿಸಿದ್ದಾರೆ. ದೇಶೀಯ ಮಾಧ್ಯಮದಲ್ಲಿ ಪ್ರಕಟವಾದ ಫ್ರೆಂಚ್‍ಪತ್ರ ದಲ್ಲಿ ಮ್ಯಾಕ್ರನ್ ಔಪಚಾರಿಕವಾಗಿ ಸ್ಪರ್ದೆಬಗ್ಗೆ ಹೇಳಿದ್ದಾರೆ. ನಾನು ಮತ್ತೆ ನಿಮ್ಮ ವಿಶ್ವಾಸವನ್ನು ಬಯಸುತ್ತಿದ್ದೇನೆ. ಶತಮಾನದ ಸವಾಲುಗಳನ್ನು ಎದುರಿಸಿ, ಫ್ರೆಂಚ್ ರಾಷ್ಠದ ಸವಾಲು ಎದುರಿಸಲು ನಾನು ನಿಮ್ಮೊಂದಿಗೆ ಇರಬಯಸುವ ಅಭ್ಯರ್ಥಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 10 ಮತ್ತು ಏಪ್ರಿಲ್ 24 ರಂದು ಎರಡು ಸುತ್ತುಗಳಲ್ಲಿ ಚುನಾವಣೆ ನಡೆಯಲಿದ್ದು, 44ರ ಹರೆಯದ ಮ್ಯಾಕ್ರನ್ ಅವರು 2 ನೇ ಅವಗೆ ಸ್ರ್ಪಧಿಸಲು ಬಯಸುತ್ತಿದ್ದಾರೆ. ಪ್ರಸ್ತುತ ರಷ್ಯಾ-ಉಕ್ರೇನ್ ಯುಧ್ದ ನಡುವೆ  ಅವರ ಆರಂಭಿಕ ಪ್ರಚಾರ ಯೋಜನೆಗಳು ಬದಲಾಗಿವೆ ಕಳೆದ ವಾರದಿಂದ ಅಧ್ಯಕ್ಷರು ತಮ್ಮ ಹೆಚ್ಚಿನ ಸಮಯವನ್ನು ವಿಶ್ವ ನಾಯಕರೊಂದಿಗೆ ರಾಜತಾಂತ್ರಿಕ ಮಾತುಕತೆಗಳಿಗೆ ಮತ್ತು ಯುರೋಪಿಯನ್ ಮತ್ತು ಇತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯಕ್ಕೆ ಮೀಸಲಿಟ್ಟಿದ್ದಾರೆ.
ಅಧ್ಯಕ್ಷೀಯ ರೇಸ್‍ನಲ್ಲಿ ಮ್ಯಾಕ್ರನ್ ಮುಂಚೂಣಿಯಲ್ಲಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ಕನ್ಸರ್ವೇಟಿವ್ ಅಭ್ಯರ್ಥಿ ವ್ಯಾಲೆರಿ ಪೆಕ್ರೆಸ್ಸೆ ಮತ್ತು ಇಬ್ಬರು ಬಲಪಂಥೀಯ ವ್ಯಕ್ತಿಗಳಾದ ಮರೀನ್ ಲೆ ಪೆನ್ ಮತ್ತು ಎರಿಕ್ ಝೆಮ್ರ್ಮೂ ಅವರ ಪ್ರಮುಖ ಎದುದಾಳಿ ಅಭ್ಯರ್ಥಿಯಾಗುವ ಸ್ಪರ್ದೆಮಾಡುವ ನಿರೀಕ್ಷೆಯಿದೆ.
ಇತ್ತೀಚಿನ ತಿಂಗಳುಗಳಲ್ಲಿ ಮ್ಯಾಕ್ರನ್ರ ಜನಪ್ರಿಯತೆಯು ತುಲನಾತ್ಮಕವಾಗಿ ಸ್ಥಿರವಾಗಿದೆ, ಮತದಾನ ಸಂಸ್ಥೆಗಳ ಆಧಾರದ ಮೇಲೆ ಅನುಮೋದನೆಯ ರೇಟಿಂಗ್ ಸುಮಾರು 40% ರಷ್ಟಿದೆ.

Articles You Might Like

Share This Article