ಹಣದೊಂದಿಗೆ ಪರಾರಿಯಾಗಿದ್ದ ನೌಕರನ ಬಂಧನ; 27ಲಕ್ಷ ವಶ

Social Share

ಬೆಂಗಳೂರು,ಫೆ.4- ಅಂಗಡಿಯಲ್ಲಿ ಮಾಲೀಕರು ಇಲ್ಲದಿದ್ದಾಗ ಲಕ್ಷಾಂತರ ಹಣದೊಂದಿಗೆ ಪರಾರಿಯಾಗಿದ್ದ ನೌಕರನನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 27 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಗಣೇಶ ವರ್ಮಾ ಬಂಧಿತ ನೌಕರ. ಎಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಗಣೇಶ ವರ್ಮಾ ಸುಮಾರು ಐದಾರು ತಿಂಗಳಿನಿಂದ ಡೆಲಿವರಿ ಕೆಲಸ ಮಾಡಿಕೊಂಡು ಮಾಲೀಕರ ನಂಬಿಕೆಗಳಿಸಿದ್ದನು.
ಡಿ.21ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಕೆಲಸದ ನಿಮಿತ್ತ ಮಾಲೀಕರು ಹೊರಗೆ ಹೋಗಿದ್ದರು. ಅಂಗಡಿಯಲ್ಲಿದ್ದ ಗಣೇಶ್ ವರ್ಮಾ, ಮಾಲೀಕರ ನಂಬಿಕೆಗೆ ದ್ರೋಹ ಬಗೆದು ಕ್ಯಾಶ್ ಬಾಕ್ಸ್ನಲ್ಲಿದ್ದ 30 ಲಕ್ಷ ರೂ.ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.
ಕೆಲ ಸಮಯದ ಬಳಿಕ ಅಂಗಡಿ ಮಾಲೀಕರು ವಾಪಸ್ ಆದಾಗ ನೌಕರನೂ ಇರಲಿಲ್ಲ. ಕ್ಯಾಶ್ ಬಾಕ್ಸ್ನಲ್ಲಿದ್ದ ಹಣವೂ ನಾಪತ್ತೆಯಾಗಿದ್ದನ್ನು ಕಂಡು ತಕ್ಷಣ ಸಿಟಿ ಮಾರ್ಕೆಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ಗೊಳಪಿಡಿಸಿ 27 ಲಕ್ಷ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article