ಶ್ರೀನಗರ, ಮಾ 10 -ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಿಚಿತ ಉಗ್ರನೊಬ್ಬ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರ ಜಿಲ್ಲಾಯ ನೈನಾ ಬಟ್ಪೋರಾ ಪ್ರದೇಶದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರ ಅಡಗಿದ್ದ ತಾಣ ಸಮೀಪಿಸುವಾಗ ನಮ್ಮ ಮೇಲೆ ಗುಂಡಿನ ದಾಳಿ ನಡೆಸಲಾಯಿತು ನಂತರ ಎನ್ಕೌಂಟರ್‍ನ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರಗಾಮಿ ಬಲಿಯಾದುದ್ದಾನೆ ಎಂದು ಹೇಳಿದ್ದಾರೆ. ಹತ್ಯೆಗೀಡಾದ ಉಗ್ರನ ಗುರುತು ಮತ್ತು ಗುಂಪು ಸಂಬಂಧವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
