ಮದ್ಯಕ್ಕೆ ಪರ್ಯಾಯವಾಗಿ ಭಾಂಗ್ ಮತ್ತುಗಾಂಜಾ ಬಳಕೆ ಪ್ರೋತ್ಸಾಹಿಸಬೇಕೆಂದ ಬಿಜೆಪಿ ಶಾಸಕ

Social Share

ಬಿಲಾಸ್ಪುರ, ಜು.25 -ಮದ್ಯಕ್ಕೆ ಪರ್ಯಾಯವಾಗಿ ಭಾಂಗಿ ಮತ್ತು ಗಾಂಜಾ ಬಳಕೆಯನ್ನು ಪ್ರೋತ್ಸಾಹಿಸಬೇಕು ಎಂದು ಛತ್ತೀಸ್‍ಗಢದ ಬಿಜೆಪಿ ಶಾಸಕ ಡಾ.ಕೃಷ್ಣಮೂರ್ತಿ ಬಂಧಿ ಸಲಹೆ ನೀಡಿದ್ದಾರೆ. ಮದ್ಯ ವ್ಯಸನಿ ಜನರು ಅತ್ಯಾಚಾರ, ಕೊಲೆ ಮತ್ತು ಡಕಾಯಿತಿಯಂತಹ ಅಪರಾಧಗಳನ್ನು ಮಾಡುತ್ತಾರೆ ಆದ್ದರಿಂದ ಭಾಂಗಿ ಮತ್ತು ಗಾಂಜಾ ಸೇದುವವರು ಅಪಾಯಕಾರಿಗಳಲ್ಲ ಎಂದು ಹೇಳಿ ರಾಜ್ಯದಲ್ಲಿ ಹೊಸ ಸಮಚಲನ ಮೂಡಿಸಿದ್ದಾರೆ .

ಆಡಳಿತಾರೂಢ ಕಾಂಗ್ರೆಸ್ ನಾಯಕರು ಇದನ್ನು ಟೀಕಿಸಿದ್ದಾರೆ ಆದರೆ ನಾಯಕರ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸಬೇಕೆಂದು ಬಯಸಿದರೆ, ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಂದೆ ಬೇಡಿಕೆಯನ್ನು ಮಂಡಿಸಬೇಕು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದರು.

ಮಾದಕ ನಿಯಂತ್ರಣ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗಾಂಜಾ ಮಾರಾಟ ಮತ್ತು ಸೇವನೆಯನ್ನು ನಿಷೇಸಲಾಗಿದೆ, ಆದರೆ ಗಾಂಜಾ ಸಸ್ಯದ ಎಲೆಗಳನ್ನು ಬಳಸಿ ತಯಾರಿಸಿದ ಖಾದ್ಯ ಮಿಶ್ರಣವಾದ ಭಾಂಗ್ ಅನ್ನು ಕಾನೂನಿನಡಿಯಲ್ಲಿ ಅನುಮತಿಸಲಾಗಿದೆ ಎಂದು ಅಕಾರಿ ತಿಳಿಸಿದ್ದಾರೆ.

ಚುನಾವಣಾ ಭರವಸೆಯಂತೆ ಮದ್ಯಪಾನ ನಿಷೇಧದ ಕುರಿತು ಜುಲೈ 27 ರಂದು ಮತ್ತೆ ಸದನದಲ್ಲಿ ಚರ್ಚೆಯಾಗಲಿದೆ ಸಿಎಂ ತಿಳಿಸಿದ್ದಾರೆ,ಪ್ರತಿಪಕ್ಷ ಬಿಜೆಪಿ ಅಪರಾಧ ಚಟುವಟಿಕೆ ಹಚ್ಚಳ ಕುರಿತು ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಅಂದೆ ಮದ್ಯ ನಿಷೇಧ ಚರ್ಚೆ ಬರುವ ಸಾಧ್ಯತೆ ಇದೆ.ಇಂತಹ ಅಪಕ್ವವಾದ ಆಲೋಚನೆಗಳು ಸುಸಂಸ್ಕøತ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ ಎಂದು ಕೆಲ ಶಾಸಕರು ಹೇಳಿದ್ದಾರೆ

Articles You Might Like

Share This Article