ಕ್ಯಾನ್ಸರ್‌ಗೆ ನಕಲಿ ಔಷಧಿ ತಯಾರಿಸುತ್ತಿದ್ದ ವೈದ್ಯರು ಸೇರಿ 7 ಮಂದಿ ಬಂಧನ

Social Share

ನವದೆಹಲಿ,ನ.16- ಕ್ಯಾನ್ಸರ್‌ಗೆ ನಕಲಿ ಔಷಧಿ ತಯಾರಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಇಂಜಿನಿಯರ್, ವೈದ್ಯರು ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಕ್ಯಾನ್ಸರ್‍ಗೆ ನಕಲಿ ಔಷಧವನ್ನು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವೊಂದು ಬೆಳಕಿಗೆ ಬಂದಿದೆ. ಈ ಆರೋಪಿಗಳು ಹರಿಯಾಣದ ಸೋನಿಪತ್‍ನಲ್ಲಿ ಔಷಧ ಕಾರ್ಖಾನೆ ಮತ್ತು ಘಾಜಿಯಾಬಾದ್‍ನಲ್ಲಿ ಮಳಿಗೆ ಹೊಂದಿದ್ದರು.

ಆರೋಪಿಗಳಿಂದ 8 ಕೋಟಿ ರೂ. ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಎರಡುಮೂರು ವರ್ಷಗಳಿಂದ ಈ ಜಾಲದಲ್ಲಿ ಸಕ್ರಿಯರಾಗಿದ್ದ ಮೂರು ಮಂದಿ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಸಿಕ್ಕಿಬಿದ್ದವರ ಪೈಕಿ ಇಬ್ಬರು ಇಂಜಿನಿಯರ್‍ಗಳಿಗೆ ಒಬ್ಬ ವೈದ್ಯ, ಮತ್ತೊಬ್ಬ ಎಂಬಿಎ ಪದವೀಧರ ಸೇರಿದ್ದಾರೆ. ಹೆಚ್ಚಿನ ಮುಂದಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article