‘ಇಂಜಿನಿಯರ್ಸ್ ಡೇ’ : ಪ್ರಧಾನಿ ಮೋದಿ ಶುಭಾಶಯ

Social Share

ನವದೆಹಲಿ, ಸೆ 15 – ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾವಂತ ಇಂಜಿನಿಯರ್‍ಗಳ ಸಮೂಹವನ್ನು ಹೊಂದಿರುವ ಭಾರತ ಪುನೀತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಂಜಿನಿಯರ್ ದಿನವಾದ ಇಂದು ಜನತೆಗೆ ಶುಭಾಶಯ ಕೋರಿರುವ ಅವರು, ಎಂಜಿನಿಯರಿಂಗ್ ಕೆಲಸಗಳ ಪ್ರವರ್ತಕರಿಗೆ ಮನ್ನಣೆ ನೀಡಿದ ಹಿಂದಿನ ಮೈಸೂರು ಸಾಮ್ರಾಜ್ಯದ ಅರಸರು ಮತ್ತು ದಿವಾನರಾಗಿದ್ದ ಭಾರತರತ್ನ ಮೇದಾವಿ ಇಂಜಿನಿಯರ್ ರಾಜನೀತಿಜ್ಞ ಎಂ.ವಿಶ್ವೇಶ್ವರಯ್ಯಅವರನ್ನು ಸ್ಮರಿಸಿ ಅವರ ಜನ್ಮದಿನವನ್ನು ಎಂಜಿನಿಯರ್ ದಿನ ಆಚರಿಸಲಾಗುತ್ತದೆ. ಎಲ್ಲ ಎಂಜಿನಿಯರ್‍ಗಳಿಗೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸುವುದು ಸೇರಿದಂತೆ ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.

ಇಂದು ನಾವು ಸರ್ ಎಂ.ವಿಶ್ವೇಶ್ವರಯ್ಯನವರ ಅದ್ಭುತ ಕೊಡುಗೆಯನ್ನು ಸ್ಮರಿಸಿ ಭವಿಷ್ಯದ ಎಂಜಿನಿಯರ್‍ಗಳ ಪೀಳಿಗೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಮತ್ತು ಸ್ಪೂರ್ತಿ ನೀಡಲಿ ಎಂದು ಅವರು ಹೇಳಿದ್ದಾರೆ. ಮೋದಿ ಅವರು ತಮ್ಮ ಮನ್ ಕಿ ಬಾತ್ ಪ್ರಸಾರದ ಒಂದು ತುಣುಕನ್ನು ಪೋಸ್ಟ್ ಮಾಡಿದ್ದಾರೆ.

Articles You Might Like

Share This Article