ಅಲ್ ಖೋರ್ (ಕತಾರ್), ಡಿ.5- ಕಳೆದ ರಾತ್ರಿ ಇಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಸೆನೆಗಲ್ ವಿರುದ್ದ ಗೆಲುವು ಸಾಧಿಸಿ ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್‍ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.
ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರತಿ ಹಂತದಲ್ಲೂ ಎದುರಾಳಿ ಸೆನೆಗಲ್ ಆಟಗಾರರಿಗೆ ವಿರಮಿಸಲು ಅವಕಾಶ ನೀಡದೆ ಆಕ್ರಮಣಕಾರಿ ಆಟದ ಮೂಲಕ ಯುವ ಇಂಗ್ಲೆಂಡ್ ಪಡೆ 3-0 ಗೋಲುಗಳ ಅಂತರದಿಂದ ದೊಡ್ಡ ಗೆಲುವು ದಾಖಲಿಸಿತು.
ಮೊದಲಿಗೆ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಮೊದಲ ಗೋಲು ಗಳಿಸಿದ್ದು ವಿಷೇಶವಾಗಿತ್ತು, ಇದು ಈ ವರ್ಷದ ವಿಶ್ವಕಪ್‍ನಲ್ಲಿ ಅವರ ಮೊದಲ ಸಾಧನೆಯಾಗಿದೆ . ಜೋರ್ಡಾನ್ ಹೆಂಡರ್ಸನ್ ಮತ್ತು ಬುಕಾಯೊ ಸಾಕಾ ಕೂಡ ಗೋಲುಗೊಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಮಹಿಳೆ ಗ್ಯಾಂಗ್ ರೇಪ್ ಮಾಡಿ, ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಸುಟ್ಟ ಕಾಮುಕರು..!
ಮುಂದಿನ ಶನಿವಾರ ಅಲ್ ಬೇಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್‍ನ್ನು ಎದುರಿಸಲಿರುವ ಇಂಗ್ಲೆಂಡ್ ಪ್ರಮುಖ ಸವಾಲು ಒಡ್ಡಿಲಿದೆ. ಈ ಪಂದ್ಯ ರೊಮಾಂಚಕಾರಿಯಾಗಲಿದ್ದು ಯಾರು ಸೆಮಿಫೈನಲ್ ತಲುಪುತ್ತಾರೆ ಎಂಬುದನ್ನು ತಿಳಿಯಲು ವಿಶ್ವದ ಪುಟ್‍ಬಾಲ್ ಪ್ರಿಯರು ಕಾತರರಾಗಿದ್ದಾರೆ. ಈ ಹಿಂದೆ ರಷ್ಯಾದಲ್ಲಿ ನಡೆದ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಸೆಮಿಫೈನಲ್ ತಲುಪಿತ್ತು.
#England, #beat, #Senegal, #quarterfinal,