ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ವಲಸಿಗರ ಸೇರಿಸುವ ಕುರಿತು TMC ಶಾಸಕ ವಿವಾದಿತ ಹೇಳಿಕೆ

Social Share

ಬರ್ಧಮಾನ್ (ಪ.ಬಂಗಾಳ), ನ.17- ರಾಜ್ಯದಲ್ಲಿ ಟಿಎಂಸಿ ಪಕ್ಷವನ್ನು ಬೆಂಬಲಿಸುವ ಬಾಂಗ್ಲಾದೇಶಿ ವಲಸಿಗರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಟಿಎಂಸಿ ಕಾರ್ಯಕರ್ತರಿಗೆ ಶಾಸಕ ಹೇಳುವ ಮೂಲಕ ವಿವಾದ ಎಬ್ಬಿಸಿದ್ದಾರೆ.

ಕರಡು ಮತದಾರರ ಪಟ್ಟಿ ಪರಿಷ್ಕರಣೆ ರಾಜ್ಯದಲ್ಲಿ ನಡೆಯುತ್ತಿದ್ದು ಇದರ ಲಾಭ ಪಡೆದು ಅಕ್ರಮವಾಗಿ ಬಾಂಗ್ಲಾದೇಶಿ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಬರ್ಧಮಾನ್ ದಕ್ಷಿಣ್ ಕ್ಷೇತ್ರದ ಟಿಎಂಸಿ ಶಾಸಕ ಖೋಕನ್ ದಾಸ್ ಅವರು ಬರ್ಧಮಾನ್ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಹಲವಾರು ಹೊಸ ಜನರು ಬರುತ್ತಿದ್ದಾರೆ … ಅವರು ಬಾಂಗ್ಲಾದೇಶದಿಂದ ಬಂದವರು.

ಇವರಲ್ಲಿ ಹೆಚ್ಚಿನವರು ಹಿಂದೂ ಭಾವನೆಗಳ ಆಧಾರದ ಮೇಲೆ ಬಿಜೆಪಿಗೆ ಮತ ಹಾಕುತ್ತಾರೆ. ದಯವಿಟ್ಟು ಖಚಿತಪಡಿಸಿಕೊಳ್ಳಿ. ನಮ್ಮ ಪಕ್ಷವನ್ನು ಬೆಂಬಲಿಸುವವರು ಮಾತ್ರ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಹೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದೆ

ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರತಿದಿನ ನಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳು ಸ್ಥಾನ ಪಡೆಯಬಾರದು ಎಂದು ನಾನು ಟಿಎಂಸಿ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಖೋಕನ್ ದಾಸ್ ಸ್ಪಷ್ಟನೆ ನೀಡಿದ್ದಾರೆ.

ಜಮ್ಮು-ಕಾಶ್ಮೀರ : ಕಂದಕಕ್ಕೆ ಕಾರು ಉರುಳಿಬಿದ್ದು 8 ಮಂದಿ ಸಾವು

ಶಾಸಕರು ಈ ವಿಷಯದಲ್ಲಿ ರಾಜಕೀಯ ಮಾಡುವ ಬದಲು ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಬೇಕು ಎಂದು ಬಿಜೆಪಿಯ ಸಾಂಸ್ಥಿಕ ಜಿಲ್ಲಾ ವಕ್ತಾರ ಸೌಮ್ಯರಾಜ್ ಮುಖೋಪಾಧ್ಯಾಯ ಒತ್ತಾಯಿಸಿದ್ದಾರೆ.ಇಂತಹ ಅಕ್ರಮ ತಡೆಗಾಗಗಿ ನಾವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಅವರು ಹೇಳಿದರು.

Articles You Might Like

Share This Article