ಡ್ರಗ್ ನಶೆಯಲ್ಲಿ ಇಡೀ ಕುಟುಂಬವನ್ನೇ ಕೊಂದು ಹಾಕಿದ ಪಾಪಿ

Social Share

ನವದೆಹಲಿ,ನ.23- ಮಾದಕ ದ್ರವ್ಯ ವ್ಯಸನಿಯೊಬ್ಬ ತನ್ನ ಇಡಿ ಕುಟುಂಬವನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದೆ. ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದ್ದ ಕೇಶವ್ ತನ್ನ ಇಡಿ ಕುಟುಂಬವನ್ನು ಬಲಿ ತೆಗೆದುಕೊಂಡಿರುವ ಮಾದಕ ದ್ರವ್ಯ ವ್ಯಸನಿ ಎಂದು ಗುರುತಿಸಲಾಗಿದೆ.

ಪುನರ್ವಸತಿ ಕೇಂದ್ರದಿಂದ ವಾಪಸ್ಸಾಗಿದ್ದ ಕೇಶವ್ ನಿನ್ನೆ ತಡ ರಾತ್ರಿ ತನ್ನ ಪೋಷಕರು, ಸಹೋದರಿ ಹಾಗೂ ಅಜ್ಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ಕೇಶವ್ ಚೂಪಾದ ಚಾಕುವಿನಿಂದ ತನ್ನ ಅಜ್ಜಿ ದೀವಾನಾ ದೇವಿ, ತಂದೆ ದಿನೇಶ್, ತಾಯಿ ದರ್ಶನಾ ಹಾಗೂ ಸಹೋದರಿ ಊರ್ವಶಿ ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

ಇಡೀ ಕುಟುಂಬವನ್ನು ಹತ್ಯೆ ಮಾಡಿ ಪರಾರಿಯಾಗಲು ಯತ್ನಿಸಿದ ಕೇಶವ್‍ನನ್ನು ಆತನ ಸಂಬಂಧಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾಲಂನಲ್ಲಿರುವ ತನ್ನ ಮನೆಯಲ್ಲಿ ಇಡಿ ಕುಟುಂಬವನ್ನು ಹತ್ಯೆ ಮಾಡಿರುವ ಕೇಶವ್‍ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಹೋಲ್‍ಸೆಲ್ ದರದಲ್ಲಿ ಬಟ್ಟೆ ಖರೀದಿಸಿ ಕೋಟ್ಯಾಂತರ ರೂ. ವಂಚನೆ

Entire, Family, Killed, drug, addict, Delhi,

Articles You Might Like

Share This Article