ಬೆಂಗಳೂರು,ಮಾ.15- ಕೊನೆಗೂ ನೌಕರರ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಎಸ್ಕಾಂಗಳ ನೌಕರರ ಶೇ.20ರಷ್ಟು ವೇತನವನ್ನು ಪರಿಷ್ಕರಿಸಿದೆ.
2022 ಏಪ್ರಿಲ್ ತಿಂಗಳಿನಿಂದ ಪೂರ್ವಾನ್ವಯ ಆಗುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಸ್ಕಾಂ, ಚೆಸ್ಕಾಂ, ಎಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಎಲ್ಲ ನೌಕರರಿಗೂ ಇದು ಅನ್ವಯವಾಗಲಿದೆ.
ಈಗಿರುವ ವೇತನದ ಮೇಲೆ 2022 ಏಪ್ರಿಲ್ ತಿಂಗಳಿನಿಂದ ಶೇ.20ರಷ್ಟು ವೇತನ ಪರಿಷ್ಕರಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಮಾ.14ರಂದು ಒಕ್ಕೂಟದ ಅಧ್ಯಕ್ಷರು ಮತ್ತು ಪಧಿದಾಕಾರಿಗಳ ಜೊತೆ ಚರ್ಚಿಸಿ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ ನಂತರ ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘವು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದರಿಂದ ಕರುನಾಡು ಕತ್ತಲಿನಲ್ಲಿ ಮುಳುಗುವ ಆತಂಕ ಎದುರಾಗಿತ್ತು.
ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ
ನೌಕರರ ಹೋರಾಟಕ್ಕೆ ನಿವೃತ್ತ ನೌಕರರ ಸಂಘ ಕೂಡ ಬೆಂಬಲ ಕೊಟ್ಟಿತ್ತು. ಲೈನ್‍ಮ್ಯಾನ್‍ಗಳಿಂದ ಹಿಡಿದು ಎಂಜಿನಿಯರ್‍ಗಳವರೆಗೆ ಸುಮಾರು 60 ಸಾವಿರ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದರು.
ತಾಂತ್ರಿಕ ದೋಷಗಳು, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವುದು ಸೇರಿದಂತೆ ಯಾವುದೇ ಆಡಳಿತಾತ್ಮಕ ಕಾರ್ಯಗಳನ್ನು ನೌಕರರು ನಿರ್ವಹಿಸದಿರಲು ತೀರ್ಮಾನಿಸಿದರು.
ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಅಡಿಯಲ್ಲಿ ಬಂದರೂ ಸರಕಾರ ವೇತನ ಹೆಚ್ಚಿಸಬೇಕು ಹಾಗೂ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಸಂಘದ ಸದಸ್ಯರು ಮುಷ್ಕರ ನಡೆಸಲು ನಿರ್ಧರಿಸಿದ್ದರು.
ಸರಕಾರಕ್ಕೆ ಮನವಿ ಪತ್ರ ನೀಡಿ ಒಂದು ವರ್ಷವಾಗಿದೆ. ನಾವು ವೇತನದಲ್ಲಿ ಶೇಕಡಾ 40 ರಷ್ಟು ಹೆಚ್ಚಳವನ್ನು ಕೋರಿದ್ದೇವೆ. ಆದರೆ ಆಡಳಿತದೊಂದಿಗೆ ಸರಣಿ ಮಾತುಕತೆಗಳ ನಂತರ, ನಾವು ಶೇಕಡಾ 22ರಷ್ಟು ಹೆಚ್ಚಳಕ್ಕೆ ಒಪ್ಪಿಕೊಂಡಿದ್ದೇವೆ. ಆದರೆ ಹಣಕಾಸು ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಆರ್‍ಎಚ್‍ಲಕ್ಷ್ಮೀಪತಿ ಅಳಲು ತೋಡಿಕೊಂಡಿದ್ದರು.
95,000 ಮಂಜೂರಾದ ಹುದ್ದೆಗಳಲ್ಲಿ 35,000 ಖಾಲಿ ಇವೆ ಇತರ ರಾಜ್ಯಗಳಲ್ಲಿ, 1,000 ಗ್ರಾಹಕರಿಗೆ 10 ಉದ್ಯೋಗಿಗಳಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಅನುಪಾತ 1000:3 ಇದೆ. ಇದರಿಂದಾಗಿ ಕೆಲಸದ ಹೊರೆ ಹೆಚ್ಚಿದ್ದು, ನೌಕರರು ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸಂಘದ ವತಿಯಿಂದ ಕೆಲ ಸಮಯದ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಿದ್ದು, ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಏನೂ ಮಾಡಿಲ್ಲ ಎಂದು ಪದಾಧಿಕಾರಿಗಳು ದೂರಿದ್ದರು.
ಯುಗಾದಿಗೆ ಊರಿಗೆ ಹೋಗಲು ಬೆಂಗಳೂರಿಗರು ಪರದಾಡುವುದು ಗ್ಯಾರಂಟಿ
ಶೇ.40 ವೇತನ ಹೆಚ್ಚಳ ಆಗಬೇಕು. 2022ರ ಏಪ್ರಿಲ್ 1ರಿಂದ ಬಾಕಿ ವೇತನ ಬಿಡುಗಡೆ ಮಾಡಬೇಕು, ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ವಿದ್ಯುತ್ ಕಂಪನಿಗಳ ಖಾಸಗೀಕರಣ ಉದ್ದೇಶದ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.