ಶಿವಮೊಗ್ಗದಲ್ಲಿ ಲಸಿಕೆ ಅಭಿಯಾನಕ್ಕೆ ಈಶ್ವರಪ್ಪ ಚಾಲನೆ

ಶಿವಮೊಗ್ಗ, ಜ.16- ಜಿಲ್ಲಾಯಲ್ಲಿ ಕರೋನ ಲಸಿಕೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ.ಈಶ್ವರಪ್ಪ , ಸಂಸದ ಬಿ.ವೈ.ರಾಘವೇಂದ್ರ ಅವರಿಂದು ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.

ಶಿವಮೊಗ್ಗ ಜಿಲ್ಲಾಯಲ್ಲಿರುವ 23 ಸಾವಿರ ಆರೋಗ್ಯ ಕಾರ್ಯಕರ್ತರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಮೊದಲ ಹಂತದಲ್ಲಿ ಇಂದಿನಿಂದ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ 45 ಸಾವಿರ ಡೋಸ್ ಕರೋನ ಲಸಿಕೆಯನ್ನು ಜಿಲ್ಲಾಗೆ ಪೂರೈಸಲಾಗಿದೆ. ಲಸಿಕೆಯನ್ನು ಶಿವಮೊಗ್ಗದ ಎರಡು ಆಸ್ಪತ್ರೆ ಮತ್ತು ಜಿಲ್ಲಾಯ ಆರು ತಾಲ್ಲೂಕು ಆಸ್ಪತ್ರೆ ಮತ್ತು ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಪಿಹೆಚ್‍ಸಿನಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ.