ರಷ್ಯಾ ವಿರುದ್ಧ ಯುರೋಪಿಯನ್ ಒಕ್ಕೂಟ ಮತ್ತಷ್ಟು ನಿರ್ಬಂಧ ಜಾರಿ

Social Share

ಬ್ರಸೆಲ್ಸ್,ಫೆ.26- ಉಕ್ರೇನ್ ಮೇಲಿನ ಆಕ್ರಮಣವನ್ನು ಖಂಡಿಸಿ ಯೂರೋಪಿಯನ್ ಒಕ್ಕೂಟ ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಮುಂದುವರೆಸಿದೆ. ಯುದ್ಧವನ್ನು ಬೆಂಬಲಿಸಿರುವುದು, ಡ್ರೋನ್ಗಳನ್ನು ಸರಬರಾಜು ಮಾಡುತ್ತಿರುವ ಆರೋಪಕ್ಕಾಗಿ ರಷ್ಯಾದ ಹಲವು ಸಂಸ್ಥೆಗಳ ಜೊತೆಗೆ ಯೂರೋಪಿಯನ್ ಒಕ್ಕೂಟ, ಮಿಲಿಟರಿ ಮತ್ತು ರಾಜಕೀಯ ವ್ಯವಹಾರಗಳು, ದೊಡ್ಡ ಬ್ಯಾಂಕ್ಗಳೊಂದಿಗಿನ ಆರ್ಥಿಕ ವಹಿವಾಟುಗಳು, ಮಿಲಿಟರಿ ಕೈಗಾರಿಕೆ ಸೇರಿದಂತೆ ಇನ್ನಿತರ ವಹಿವಾಟುಗಳ ಮೇಲೆ ನಿರ್ಬಂಧ ವಿಸಿದೆ.

ರಷ್ಯಾದ ಮೂರು ಬ್ಯಾಂಕ್ಗಳು ಹಾಗೂ ಏಳು ಇರಾನಿನ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ರಷ್ಯಾ ಹಾಗೂ ಅದರಲ್ಲಿನ ಸಂಸ್ಥೆಗಳ ಜೊತೆ ಡ್ರೋನ್ ವಾಪಾರ ಮಾಡದಿರಲು ನಿರ್ಧರಿಸಲಾಗಿದೆ. ಈ ರೀತಿ ಖರೀದಿಸಲಾದ ಡ್ರೋನ್ಗಳನ್ನು ಉಕ್ರೇನ್ ಯುದ್ಧಕ್ಕೆ ಬಳಕೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ ಒಂದು ವರ್ಷವಾಗಿದೆ.

ರಷ್ಯವನ್ನು ದುರ್ಬಲಗೊಳಿಸಲು ನಿರ್ಬಂಧಗಳು ಸಹಕಾರಿಯಾಗಲಿವೆ. ಯುದ್ಧಕ್ಕೆ ಬಳಕೆಯಾಗುವ ಹಣದ ಪ್ರಮಾಣ ಕಡಿಮೆಯಾಗಲಿದೆ. ಈಗಾಗಲೇ ಹೆಚ್ಚಿನ ಹಣದುಬ್ಬರದಿಂದ ರಷ್ಯ ಸಂಕಷ್ಟಕ್ಕೀಡಾಗಿದೆ. ಕೋವಿಡ್ ಕಾರಣದಿಂದ ಯುರೋಪಿಯನ್ ಆರ್ಥಿಕತೆ ಸೊರಗುತ್ತಿರುವಾಗ ಯುದ್ಧ ಅನಗತ್ಯವಾಗಿತ್ತು ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಯುರೋಪಿಯನ್ ಒಕ್ಕೂಟ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಲ್ಲಿನ ಸಚಿವರು, ಜನಪ್ರತಿನಿಗಳು, ಸೇರಿದಂತೆ ಸುಮಾರು 1,400 ರಷ್ಯಾದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ, ಕ್ರೆಮ್ಲಿನ್ಗೆ ನಿಷ್ಠರಾಗಿರುವ ಅಧಿಕಾರಿಗಳನ್ನು ಯುದ್ಧ ಅಪರಾಧಗಳೆಂದು ಗುರುತಿಸಲಾಗಿದೆ. ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿರುವುದನ್ನು ಖಂಡಿಸಲಾಗಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ , ಶನಿವಾರ ರಾತ್ರಿಯ ಭಾಷಣದಲ್ಲಿ ಯುರೋಪಿಯನ್ ಒಕ್ಕೂಟದ ಹೊಸ ನಿರ್ಬಂಧಗಳನ್ನು ಸ್ವಾಗತಿಸಿದ್ದಾರೆ. 10ನೇ ಹಂತದಲ್ಲಿ ಹೊಸ ನಿರ್ಬಂಧಗಳು ಶಕ್ತಿಯುತವಾಗಿವೆ. ರಕ್ಷಣಾ ಉದ್ಯಮ ಮತ್ತು ಭಯೋತ್ಪಾದಕ ಕೃತ್ಯಗಳ ಮೇಲೆ ಪರಿಣಾಮ ಬೀರಲಿದೆ. ರಷ್ಯಾ ಸುಳ್ಳಿನಲ್ಲಿ ಎಲ್ಲರನ್ನು ನಂಬಿಸುವ ಯತ್ನ ನಡೆಸಿದೆ. ಇದಕ್ಕೆ ತಕ್ಕ ಪಾಠವಾಗಿದೆ ಎಂದಿದ್ದಾರೆ.

#EU, #slaps, #sanctions, #Russia, #officials, #banks, #trade,

Articles You Might Like

Share This Article