ಫೆ.10ರಿಂದ EVM ಯಂತ್ರಗಳ ತಪಾಸಣೆ ಶುರು

Social Share

ಬೆಂಗಳೂರು,ಫೆ.2- ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸುವ ಇವಿಎಂಗಳು ನಗರಕ್ಕೆ ಆಗಮಿಸಿದ್ದು, ಫೆ.10 ರಿಂದ 19ರವರೆಗೆ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.

ದಾಸನಪುರ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ 5.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇವಿಎಂ ಹಾಗೂ ವಿವಿಪ್ಯಾಟ್ ಸಂಗ್ರಹಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ಸೂಚನೆಯಂತೆ ನಾವು ಇಲ್ಲಿ ಇವಿಎಂ ಸಂಗ್ರಹಗಾರ ಸ್ಥಾಪನೆ ಮಾಡಿದ್ದೇವೆ. ಇಲ್ಲಿ 7 ವಿಧಾನಸಭಾ ಕ್ಷೇತ್ರಗಳ ಇವಿಎಂ ಹಾಗೂ ವಿವಿಪ್ಯಾಟ್ ಸಂಗ್ರಹ ಮಾಡಿದ್ದೇವೆ. ಅದೇ ರೀತಿ ನಗರದ ಇತರ ಮೂರು ಕಡೆಗಳಲ್ಲಿ ಶೀಘ್ರವೇ ಸಂಗ್ರಹಗಾರಗಳನ್ನು ಸ್ಥಾಪನೆ ಮಾಡುವುದಾಗಿ ಅವರು ತಿಳಿಸಿದರು.

ಸಧ್ಯ ಇಲ್ಲಿಗೆ 7 ವಿಧಾನಸಭಾ ಕ್ಷೇತ್ರಗಳ ಇವಿಎಂಗಳು ಆಗಮಿಸಿವೆ. ಈ ಯಂತ್ರಗಳ ತಪಾಸಣೆಗೆಂದು ಚುನಾವಣಾ ಆಯೋಗ 80 ಎಂಜಿನಿಯರ್‍ಗಳನ್ನು ನಿಯೋಜಿಸಿದೆ. ಫೆ.10 ರಿಂದ ರಾಜಕೀಯ ಪಕ್ಷಗಳ ಮುಖಂಡರು ಸ್ಥಳಕ್ಕೆ ಆಗಮಿಸಿ ಇವಿಎಂಗಳ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಸ್ಥಳದಲ್ಲಿರುವ ಎಂಜಿನಿಯರ್‍ಗಳು ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಲಿದ್ದಾರೆ ಎಂದರು.

ದೀದಿ ನಮಗೆ ನಿಮ್ಮ ಆಶೀರ್ವಾದ ಬೇಕಿಲ್ಲ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 3083 ಮತಗಟ್ಟೆಗಳಿರಲಿವೆ. ಈಗಾಗಲೇ ಚುನಾವಣಾ ಆಯೋಗದಿಂದ ಶೇ.125 ರಷ್ಟು ಇವಿಎಂಗಳು ಬಂದಿವೆ. ಶೇ.135 ರಷ್ಟು ವಿವಿ ಪ್ಯಾಟ್‍ಗಳ ಅವಶ್ಯಕತೆ ಇದ್ದು, ಫೆ.6 ರಂದು ವಿವಿಪ್ಯಾಟ್‍ಗಳು ಬರಲಿವೆ ಎಂದು ನಗರ ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದರು.

ಚುನಾವಣಾ ಆಯೋಗದ ಸೂಚನೆ ಮೇರೆಗೆ ನಿರ್ಮಿಸಲಾಗಿರುವ ಇವಿಎಂ ಸಂಗ್ರಹಗಾರದಲ್ಲಿ ಸಂಗ್ರಹಿಸಿಡಲಾಗುವ ಯಂತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದ್ದು, ಪೊಲೀಸರು ಸಕಲ ಭದ್ರತೆ ಒದಗಿಸಿದ್ದಾರೆ ಎಂದು ಅವರು ವಿವರಣೆ ನೀಡಿದರು.

ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಈ ವೇಳೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

EVM, machines, state, assembly, election Bengaluru,

Articles You Might Like

Share This Article