ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

Social Share

ಚಿತ್ರದುರ್ಗ,ನ.10- ಮುರುಘಾಮಠದಲ್ಲಿ ಫೋಟೋಗಳ ಕಳವು ಪ್ರಕರಣ ಸಂಬಂಧ ಮಾಜಿ ಶಾಸಕ ಹಾಗೂ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.

ಕಳೆದ ಅ.6ರಂದು ರಾಜ್ಯಾಗಣದ ಗೋಡೆ ಮೇಲಿದ್ದ 47 ಫೋಟೋ ಕಳ್ಳತನ ಆಗಿವೆ ಎಂದು ಮುರುಘಾ ಮಠದ ಆಡಳಿತದ ಉಸ್ತುವಾರಿ ವಹಿಸಿರುವ ವಸ್ತ್ರಮಠದ್ ಅವರು ಗ್ರಾಮಾಂತರ ಫೋಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ.7ರಂದು ಪ್ರಕರಣದ ಇಬ್ಬರು ಅರೋಪಿಗಳಾದ ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ ಹಾಗೂ ಎಸ್‍ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶಿವಾನಂದ ಸ್ವಾಮಿ ಅವರನ್ನು ಬಂಧಿಸಿದ್ದರು.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ, ಕಳವಳಕ್ಕೀಡಾದ ಮೂಲ ಕಾಂಗ್ರೆಸ್ಸಿಗರು

ನಂತರ ತನಿಖೆ ಕಾರ್ಯ ಮುನ್ನಡೆಸಿದ ಪೊಲೀಸರ ವಿಚಾರಣೆ ವೇಳೆ ಕಳ್ಳತನಕ್ಕೆ ಎಸ್.ಕೆ.ಬಸವರಾಜನ್ ಹಾಗೂ ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ಪ್ರಚೋದನೆಯೇ ಕಾರಣ ಎಂದು ಇಬ್ಬರು ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಬಂಧಿಸಿರುವ ಗ್ರಾಮಾಂತರ ಪೆÇಲೀಸರು, ನಗರ ಪೆÇಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಬಂಧಿಸಲು ಶೋಧ ಕಾರ್ಯ ನಡೆಸಿದ್ದಾರೆ.

ನ.14ರಿಂದ ಜೆಡಿಎಸ್‍ನ ಪಂಚರತ್ನ ರಥಯಾತ್ರೆ ಪ್ರಾರಂಭ

ಚಿತ್ರದುರ್ಗದ ನಗರ ಪೊಲೀಸ್ ಠಾಣೆಗೆ ಬಸವರಾಜನ್ ಅವರನ್ನು ವಿಚಾರಣೆಗೆ ಕರೆತಂದಿರುವ ಹಿನ್ನೆಲೆಯಲ್ಲಿ ನಗರದಲ್ಲೇಡೆ ಪೊಲೀಸರು ಹೈ ಅಲರ್ಟ್ ಆಗಿದ್ದು, ಓಬವ್ವ ವೃತ್ತ ಸೇರಿ ಹಲವೆಡೆ ಪೊಲೀಸರಿಂದ ಬಿಗಿ ಬಂದೋಬ¸್ತï ವ್ಯವಸ್ಥೆ ಮಾಡಲಾಗಿದೆ.

Articles You Might Like

Share This Article