ಪತ್ನಿ ಜೊತೆ ವಾಯು ಪಡೆಯ ಮಾಜಿ ಅಧಿಕಾರಿ ಆತ್ಮಹತ್ಯೆ

Social Share

ನವದೆಹಲಿ,ಮಾ.2- ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿ ಹಾಗೂ ಅವರ ಪತ್ನಿ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಅಜಯ್ ಪಾಲï(37) ಮತ್ತು ಮೋನಿಕಾ(32) ಸಾವನ್ನಪ್ಪಿದ್ದ ದುದೈವಿಗಳಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೆಷ್ಷೇ ಮೋನಿಕಾ ಅವರನ್ನು ಮದುವೆಯಾಗಿದ್ದ ಅಜಯ್ ಪಾಲ್ ಇತ್ತೀಚೆಗಷ್ಟೇ ವಾಯುಸೇನೆಯನ್ನು ತೊರೆದಿದ್ದರು ಮನೆಯಲ್ಲಿ ಅಜಯ್ ಪಾಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಬಾಯಿಯಲ್ಲಿ ನೊರೆ ಬಂದಿತ್ತು, ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

11 ಸಾವಿರ ಕೋಟಿಯ ಬಿಬಿಎಂಪಿ ದಾಖಲೆ ಬಜೆಟ್

ನಂತರ ಮನೆಗೆ ಮರಳಿದ ಮೋನಿಕಾ ಮಧ್ಯಾಹ್ನ ವಿಷ ಸೇವಿಸಿದ್ದಾರೆ ಬಳಿಕ ಪೊಲೀಸರು ಬಾಗಿಲು ಒಡೆದು ನೋಡಿದಾಗ ಆಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಆದರೆ ಘಟನೆಯ ಬಗ್ಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Ex-Air Force, officer, dies, suicide, Delhi, home,

Articles You Might Like

Share This Article