ವಿಶ್ವಬ್ಯಾಂಕ್ ಮುಖ್ಯಸ್ಥ ಬಂಗಾ ನೇಮಕಕ್ಕೆ ಜಾಗತೀಕ ಮನ್ನಣೆ

Social Share

ವಾಷಿಂಗ್ಟನ್,ಫೆ.24-ವಿಶ್ವಬ್ಯಾಂಕ್ ಮುನ್ನಡೆಸುವ ಹೊಣೆ ಹೊತ್ತಿರುವ ಭಾರತೀಯ ಮೂಲದ ಅಜಯ್ ಬಂಗಾ ಅವರಿಗೆ ಜಾಗತೀಕ ಪ್ರಶಂಸೆ ವ್ಯಕ್ತವಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ವಿಶ್ವಬ್ಯಾಂಕ್ ಮುಖ್ಯಸ್ಥರನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥೆ ಜಾರ್ಜೀವಾ ಸೇರಿದಂತೆ ವಿಶ್ವದ ಹಲವಾರು ಗಣ್ಯರು ಬಂಗಾ ಅವರ ನೇಮಕವನ್ನು ಸ್ವಾಗತಿಸಿದ್ದಾರೆ.

ಟ್ವಿಟರ್‍ನಲ್ಲಿ ಬಂಗಾ ಅವರ ಫೋಟೋ ಶೇರ್ ಮಾಡಿರುವ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರು ಸುಸ್ಥಿರ ಅಭಿವೃದ್ಧಿ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವ ಬಂಗಾ ಅವರ ಬದ್ಧತೆಯನ್ನು ನಾನು ಮೆಚ್ಚಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಹಲವು ವರ್ಷಗಳಿಂದ ತಿಳಿದಿರುವ ಅಜಯ್ ಬಂಗಾ ಅವರು ವಿಶ್ವಬ್ಯಾಂಕ್ ಮುನ್ನಡೆಸಲು ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂದು ಕೇಳಲು ಸಂತೋಷವಾಗಿದೆ. ಅವರ ನಾಯಕತ್ವ ಕೌಶಲ್ಯಗಳು ಮತ್ತು ನಾವೀನ್ಯತೆಯ ಉತ್ಸಾಹವು ನನಗೆ ಚಿರಪರಿಚಿತವಾಗಿದೆ ಎಂದಿದ್ದಾರೆ.

ಕಾಶ್ಮೀರ ವಿಚಾರ : ವಿಶ್ವಸಂಸ್ಥೆಯಲ್ಲಿ ದಿವಾಳಿ ಪಾಕ್‍ಗೆ ಭಾರತದ ತಿರುಗೇಟು

ಮಾಸ್ಟರ್‍ಕಾರ್ಡ್ ಸಿಇಒ ಮೈಕೆಲ್ ಮಿಬಾಚ್ ಅವರು ಬಂಗಾ ಅವರು ವಿಶ್ವ ಬ್ಯಾಂಕ್ ಮುನ್ನಡೆಸಲು ಪ್ರೇರಿತ ಆಯ್ಕೆಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಅವರು ಮಾರ್ಗದರ್ಶಿ, ಸ್ನೇಹಿತ ಮತ್ತು ಪ್ರಥಮ ದರ್ಜೆಯ ನಾಯಕರಾಗಿದ್ದಾರೆ, ಅವರು ಪ್ರಪಂಚದಾದ್ಯಂತ ನೂರಾರು ಮಿಲಿಯನ್ ಜನರನ್ನು ಡಿಜಿಟಲ್ ಆರ್ಥಿಕತೆಗೆ ತರಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ ಎಂದು ಮಿಬಾಚ್ ಹೇಳಿದ್ದಾರೆ.ಮಾತ್ರವಲ್ಲದೆ ಬಂಗಾ ಅವರ ನೇಮಕವನ್ನು ಇನ್ನಿತರ ಹಲವಾರು ದೇಶಗಳ ನಾಯಕರುಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

#ExMastercardCEO, #AjayBanga, #Nominated, #USPresident, #Lead, #WorldBank,

Articles You Might Like

Share This Article