ಮಾಜಿ ಸಚಿವರ ಮನೆಯಲ್ಲಿ ಕಳ್ಳತನ, ಅಡುಗೆ ಭಟ್ಟನ ಅರೆಸ್ಟ್

Social Share

ಬೆಂಗಳೂರು,ಆ.1- ಮಾಜಿ ಗೃಹ ಸಚಿವರ ಮನೆಯಲ್ಲಿ ನಗದು ಸೇರಿದಂತೆ 1.30 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದಾಶಿವನಗರದಲ್ಲಿರುವ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಆರೋಪಿ ಅಡುಗೆ ಕೆಲಸ ಮಾಡಿಕೊಂಡಿದ್ದನು.

ಇತ್ತೀಚೆಗೆ ಅವರ ಮನೆಯಲ್ಲಿ 70 ಸಾವಿರ ಹಣ, 50 ಸಾವಿರ ಮೌಲ್ಯದ ವಾಚು ಹಾಗೂ ಮೊಬೈಲ್ ಕಳ್ಳತನ ವಾಗಿತ್ತು. ಈ ಬಗ್ಗೆ ಪಾಟೀಲ್ ಅವರ ಪಿಎ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಅಡುಗೆ ಭಟ್ಟ ಒಡಿಶಾ ಮೂಲದ ಆರೋಪಿ ಜಯಂತ್‍ನನ್ನು ಬಂಧಿಸಿದ್ದಾರೆ.

Articles You Might Like

Share This Article