ಲಕ್ನೋ,ಜ.1- ಸರ್ಕಾರದ ಖಜಾನೆಯಲ್ಲಿರುವ ಹಣ ಬಿಜೆಪಿ ನಾಯಕರನ್ನು ಚಳಿಯಲ್ಲೂ ಬೆಚ್ಚಗಿರಿಸಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ನಾಯಕಿ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್ಪಿ ತನ್ನದೇ ಆದ ಕಾರ್ಯ ವಿಧಾನ ಹೊಂದಿದೆ. ಅದು ಇತರ ಪಕ್ಷಗಳನ್ನು ಅನುಕರಿಸಲು ಬಯಸುವುದಿಲ್ಲ ಎಂದೂ ಮಾಯಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾಯಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಬೆಹನ್ ಜೀ ಇನ್ನೂ ಚಳಿಯಿಂದ ಹೊರ ಬರಬೇಕಿದೆ. ಚುನಾವಣೆಗಳು ಸನಿಹವಿದ್ದರೂ ಮಾಯಾ ಪ್ರಚಾರಕ್ಕೆ ಬಂದಿಲ್ಲ.
ಇದು ಅವರು ಈಗಾಗಲೇ ಭಯಭೀತರಾಗಿರುವುದನ್ನು ಅರುಹುತ್ತದೆ ಎಂದು ಮೊರಾದಾಬಾದ್, ಅಲೀಗಢ ಮತ್ತು ಉನ್ನಾವ್ನಲ್ಲಿ ಜನವಿಶ್ವಾಸಯಾತ್ರೆಯ ಸಂದರ್ಭದಲ್ಲಿ ನುಡಿದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಮಾಯಾವತಿ ಕಾಂಗ್ರೆಸ್ ಅಥವಾ ಬಿಜೆಪಿ ಕೇಂದ್ರ ಅಥವಾ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಆ ಪಕ್ಷಗಳ ನಾಯಕರು ಚುನಾವಣೆಗೆ ಕೇವಲ ಎರಡು ತಿಂಗಳುಗಳಿರುವಾಗ ಒಂದಾದ ಮೇಲೆ ಒಂದರಂತೆ ಸಾರ್ವಜನಿಕ ಸಭೆಗಳನ್ನು ನಡೆಸುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
