ನವದೆಹಲಿ,ಡಿ. 6- ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿರುವುದಕ್ಕೆ ಕಡಿವಾಣ ಹಾಕುವುದು ಆಧ್ಯತೆ ವಿಷಯವಾಗಬೇಕೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವೊಲ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರೀಯ ಏಷ್ಯಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆ ಎಲ್ಲಾ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಮತ್ತು ಅದಕ್ಕೆ ಬೆಂಬಲ ನೀಡುವವರೆಗೆ ನಿಷೇಧ ಹೇರಬೇಕು.
ಭಯೋತ್ಪಾದನೆ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದರೆ ಪ್ರತಿರೋಧದ ಸಂಪ್ರದಾಯಗಳು ಹೆಚ್ಚಾಗಬೇಕು. ಕೇಂದ್ರೀಯ ಏಷ್ಯಾ ರಾಷ್ಟ್ರಗಳು ತನ್ನ ಭಾಗದಲ್ಲಿ ಅತ್ಯುನ್ನತ್ತವಾದ ಆಧ್ಯತೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ನಿಯಂತ್ರಣಕ್ಕೆ ನೀಡಬೇಕಿದೆ. ನೆರಹೊರೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲಸಬೇಕು ಎಂದು ಹೇಳಿದರು.
ಹೈಕಮಾಂಡ್ ಚಿತ್ತ ಕರ್ನಾಟಕದತ್ತ, ಬಿಜೆಪಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ
ಸಭೆಯಲ್ಲಿ ಕಜಕಿಸ್ತಾನ್, ತಜಕಿಸ್ತಾನ್, ಉಜಕಿಸ್ತಾನ್, ಕ್ರಿಸ್ತಿಸ್ತಾನ್ ರಾಷ್ಟ್ರಗಳ ಭದ್ರತಾ ಸಲಹೆಗಾರರು ಸಭೆಯಲ್ಲಿ ಭಾಗವಹಿಸಿದ್ದರು. ಅಫ್ಘಾನಿಸ್ತಾನ್ ನಮಗೆ ಕಾಳಜಿ ವಹಿಸಬಹುದಾದ ಬಹುಮುಖ್ಯ ವಿಷಯವಾಗಿದೆ. ಅಲ್ಲಿನ ಉದ್ದೇಶಗಳಿಗೆ ಮತ್ತು ಆಧ್ಯತೆಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಕಿದೆ. ಇದೇ ರೀತಿ ಸಮಾನಾಂತರ ವಿಷಯಗಳ ಬಗ್ಗೆ ಮೇಜು ಸುತ್ತಲೂ ಇರುವವರು ಕಣ್ಣಾಡಿಸಬೇಕು ಎಂದಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಷ್ಟವಾಗಬಹುದು ಉಸಿರಾಟ
ಪ್ರಮುಖ ಆಧ್ಯತೆಯೊಂದಿಗೆ ಕೇಂದ್ರ ಏಷ್ಯಾ ರಾಷ್ಟ್ರಗಳ ಸಂಪರ್ಕಕ್ಕೆ ಭಾರತ ಸಹಕಾರ ನೀಡಲಿದೆ. ಹೂಡಿಕೆ ಮತ್ತು ಸಂಪರ್ಕ ನಿರ್ಮಾಣಕ್ಕೆ ಬೆಂಬಲವಾಗಲಿದೆ ಎಂದು ಹೇಳಿದ್ದಾರೆ.
Existence, terrorist, networks, Afghanistan, concern, NSA, Ajit Doval,